ಕಾಸರಗೋಡು : ಅರಣ್ಯ ದಲ್ಲಿ ಮಹಿಳೆ ಸೇರಿದಂತೆ ಇಬ್ಬರು ಪ್ರತ್ಯಕ್ಷ - ನಕ್ಸಲರು ಎಂಬ ಶಂಕೆ
Update: 2016-02-03 16:39 IST
ಕಾಸರಗೋಡು : ಕಾರಡ್ಕ ಪರಿಸರದ ಅರಣ್ಯ ದಲ್ಲಿ ಮಹಿಳೆ ಸೇರಿದಂತೆ ಇಬ್ಬರು ಪ್ರತ್ಯಕ್ಷಗೊಂಡಿದ್ದು ,ಶಂಕಿತರ ಬಗ್ಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ . ಶಂಕಿತರು ನಕ್ಸಲರು ಎಂಬ ಶಂಕೆ ಉಂಟಾಗಿದ್ದು , ಇದಕ್ಕಾಗಿ ನಕ್ಸಲ್ ನಿಗ್ರಹ ದಳದ ನೆರವನ್ನು ಕೋರಲಾಗಿದೆ . ಇಬ್ಬರನ್ನು ಸ್ಥಳಿಯರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದುಇದರಂತೆ ಶೋಧ ಕಾರ್ಯ ನಡೆಯುತ್ತಿದೆ .
ಈ ಹಿಂದೆಯೂ ಈ ಪ್ರದೇಶದಲ್ಲಿ ಶಂಕಿತರು ಪ್ರತ್ಯಕ್ಷ ಗೊಂಡಿದ್ದು , ಬಳಿಕ ನಾಪಾತ್ತೆಯಾಗಿದ್ದರು .
ಪೊಲೀಸರು ಶೋಧ ನಡೆಸಿದರೂ ಶಂಕಿತರ ಸುಳಿವು ಲಭಿಸಲಿಲ್ಲ . ಎರಡು ದಿನಗಳ ಹಿಂದೆ ತಂಡವು ಈ ಪ್ರದೇಶದಲಿ ಮತ್ತೆ ಬಂದಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.