×
Ad

ಮಣಿಪಾಲ;ಮಹಿಳಾ ಕ್ರಿಕೆಟಿಗೆ ಹೆಚ್ಚಿನ ಬೆಂಬಲ ಅಗತ್ಯ: ಡಾ.ಬಲ್ಲಾಳ್

Update: 2016-02-03 17:15 IST

ಮಣಿಪಾಲ, ಫೆ.3: ಕರ್ನಾಟಕದ ಕರಾವಳಿ ಭಾಗದಲ್ಲಿ ಪುರುಷರ ಕ್ರಿಕೆಟ್ ಆಟಕ್ಕೆ ಸಿಗುವ ಮನ್ನಣೆ, ಪ್ರೋತ್ಸಾಹ ಮಹಿಳಾ ಕ್ರಿಕೆಟ್‌ಗೆ ಸಿಗುತ್ತಿಲ್ಲ. ಇಲ್ಲಿನ ಯುವತಿಯರಲ್ಲಿ ಉತ್ತಮ ಕ್ರಿಕೆಟ್‌ಆಟದ ಪ್ರತಿಭೆ ಇದ್ದರೂ ಆಡುವ ಅವಕಾಶ, ಪ್ರೋತ್ಸಾಹದ ಕೊರತೆಯಿಂದ ಅವರು ಕ್ರಿಕೆಟ್ ರಂಗದಲ್ಲಿ ಮುಂದಡಿ ಇಡಲಾ ಗುತ್ತಿಲ್ಲ. ಆ ಮೂಲಕ ರಾಜ್ಯ, ರಾಷ್ಟ್ರ ತಂಡಗಳಿಗೂ ಅಯ್ಕೆಯಾಗುವ ಅವಕಾಶ ಇಲ್ಲವಾಗುತ್ತಿದೆ ಎಂದು ಮಣಿಪಾಲ ವಿವಿ ಪ್ರೊ ಚಾನ್ಸಲರ್ ಹಾಗೂ ಉಡುಪಿ ಜಿಲ್ಲಾ ಕ್ರಿಕೆಟ್ ಸಂಸ್ಥೆಯ ಗೌರವಾಧ್ಯಕ್ಷ ಡಾ.ಎಚ್.ಎಸ್.ಬಲ್ಲಾಳ್ ಹೇಳಿದ್ದಾರೆ.
ಮಣಿಪಾಲ ವಿವಿಯಲ್ಲಿ ಇತ್ತೀಚೆಗೆ ನಡೆದ ಉಡುಪಿ ಜಿಲ್ಲಾ ಕ್ರಿಕೆಟ್ ಸಂಸ್ಥೆಯ ವಾರ್ಷಿಕ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ಈ ಬಗ್ಗೆ ಗಮನಹರಿಸು ವುದಾಗಿ ತಿಳಿಸಿದ ಸಂಸ್ಥೆಯ ಅಧ್ಯಕ್ಷ ಡಾ.ಕೃಷ್ಣಪ್ರಸಾದ್, ಕ್ರಿಕೆಟ್ ಆಡದ ರಾಷ್ಟ್ರಗಳ ನಡುವಣ ಅಂತಾರಾಷ್ಟ್ರೀಯ ಪಂದ್ಯಕೂಟವೊಂದನ್ನು ಮಣಿಪಾಲದಲ್ಲಿ ಆಯೋಜಿಸುವ ಪ್ರಸ್ತಾಪವಿರುವುದಾಗಿ ತಿಳಿಸಿದರು.
ವಾರ್ಷಿಕ ಸಭೆಯಲ್ಲಿ ಮುಂದಿನ ಮೂರು ವರುಷಗಳ ಅವಧಿಗೆ ಈ ಕೆಳಗಿ ನವರನ್ನು ಹೊಂದಿರುವ ಪದಾಧಿಕಾರಿ ಸಮಿತಿಯನ್ನು ಸರ್ವಾನುಮತದಿಂದ ಆರಿಸಲಾಯಿತು.
ಗೌರವಾಧ್ಯಕ್ಷರು-ಡಾ.ಎಚ್.ಎಸ್.ಬಲ್ಲಾಳ್, ಅಧ್ಯಕ್ಷ- ಡಾ.ಕೃಷ್ಣಪ್ರಸಾದ್, ಪ್ರಧಾನ ಸಲಹೆಗಾರರು-ಪ್ರಕಾಶ್ ಕರ್ಕೆರಾ, ಉಪಾಧ್ಯಕ್ಷರು- ಲಾತವ್ಯಆಚಾರ್ಯ, ಉದಯಕುಮಾರ್ ಕಿನ್ನಿಮೂಲ್ಕಿ, ಶಶಿಧರ್ ರಾವ್ ಕಿದಿಯೂರು, ಸಂಘಟನಾ ಕಾರ್ಯದರ್ಶಿ- ಪ್ರಭಾಕರ ಶೆಟ್ಟಿ, ಕಾರ್ಯದರ್ಶಿ- ಬಾಲಕೃಷ್ಣ ಪರ್ಕಳ, ಜತೆ ಕಾರ್ಯದರ್ಶಿಗಳು- ಡಾ. ಕೆಂಪರಾಜ್, ಗುರುಪ್ರಸಾದ್, ವಿಜಯ ಆಳ್ವ, ಸಿರಾಜುದ್ದೀನ್ ಮಹಮ್ಮದ್.
 ಕೋಶಾಧಿಕಾರಿ:ವೈ. ಎಸ್. ರಾವ್, ಜತೆ ಕೋಶಾಧಿಕಾರಿ: ರೆನ್ ಟ್ರೆವರ್ ಡಯಾಸ್, ಪ್ರಧಾನ ಸಂಪಾದಕರು-ಬಾಲಕೃಷ್ಣ ಮದ್ದೋಡಿ, ಸಹಾಯಕ ಸಂಪಾದಕರು- ಲಿಂಗಪ್ಪ.
 ಕಾರ್ಯಕಾರಿ ಸಮಿತಿಯ ಸದಸ್ಯರು: ಶುಕೂರು ಸಾಹೇಬ್, ಚಂದ್ರಪ್ರಕಾಶ್ ಶೆಟ್ಟಿ, ಶ್ರೀಧರ್, ಉದಯಕುಮಾರ್ ಕಟಪಾಡಿ, ರತ್ನಾಕರ ಶೆಟ್ಟಿ, ಬಿ.ಕೆ. ಯಶವಂತ, ಜಯರಾಮ ಆಚಾರ್ಯ, ಡಾ.ಗಣೇಶ್‌ಕಾಮತ್, ಅಬ್ದುಲ್ ರಹಿಂ, ಡಾ.ಆಶೋಕ್‌ಕುಮಾರ್ ಓಕುಡೆ, ಇಮ್ತಿಯಾಝ್, ಪ್ರತಾಪ್ ಕೋಟ್ಯಾನ್, ರಾಜೇಂದ್ರ ಸುವರ್ಣ, ನಿತ್ಯಾನಂದ ಪೈ, ನಿರಂಜನ ಪ್ರಭು, ಸಫ್ತಾರ್ ಅಲಿ, ಅನುತ್ ಶೆಟ್ಟ, ಅಬೂಬಕರ್ ವೆನಿಲ್ಲಾ, ಪ್ರಫುಲ್‌ಚಂದ್ರ, ಸಂತೋಷ್ ಕುಂಜಿಬೆಟ್ಟ್ಟು, ಸಂತೋಷ್ ಸುರತ್ಕಲ್, ಚಂದ್ರಶೇಖರ್ ಹೆಗ್ಡೆ, ಅಂಡಾರು ದೇವಿಪ್ರಸಾದ್ ಶೆಟ್ಟಿ, ನಾಗರಾಜೇಂದ್ರ ಎಂ.ಆರ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News