×
Ad

ಕಡಬ;ಕರಾಟೆ ಚಾಂಪಿಯನ್‌ಶಿಪ್ ನಲ್ಲಿ ಚಿನ್ನದ ಪದಕ

Update: 2016-02-03 17:26 IST

ಕಡಬ: ಮಂಗಳೂರಿನ ಲಾಲ್ ಬಾಗ್ ಶ್ರೀನಿವಾಸ ಮಲ್ಯ ಒಳಾಂಗಣ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ ೮ನೇ ರಾಷ್ಟ್ರೀಯ ವೆಸ್ಟರ್ನ್ ಕರಾಟೆ ಚಾಂಪಿಯನ್‌ಶಿಪ್ ನಲ್ಲಿ ಕೇರಳ ಸಮಾಜಂ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಮಹಮ್ಮದ್ ಆಶಿಕ್, ಅಶ್ರೀಫ ಮತ್ತು ಮಹಮ್ಮದ್ ಅಶ್ಫಾನ್ ತಲಾ ಮೂರರಂತೆ ಒಟ್ಟು ೯ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಇವರು ಕಡಬ ಕೆರ್ಮಾಯಿ ನಿವಾಸಿ ಕದ್ರಿ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯ ಸಿಬ್ಬಂದಿ ಮಹಮ್ಮದ್ ಕೆ. ಯವರ ಮಕ್ಕಳಾಗಿರುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News