ಮಂಗಳೂರು; ಸವೋರ್ತ್ತಮ ಸೇವಾ ಪ್ರಶಸ್ತಿ ವಿಜೇತ ರಮೇಶ್ ಕಿರೋಡಿಯನ್
Update: 2016-02-03 18:06 IST
ಮಂಗಳೂರು, ಫೆಬ್ರವರಿ 3, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಜಂಟಿ ಕಾರ್ಯದರ್ಶಿಯಾಗಿರುವ ರಮೇಶ್ ಕಿರೋಡಿಯನ್ ಅವರಿಗೆ ಈ ವರ್ಷದ ಸರ್ವೋತ್ತಮ ಸೇವಾ ಪ್ರಶಸ್ತಿ ದೊರೆತಿದೆ.
ಗಣರಾಜ್ಯೋತ್ಸವ ದಿನದಂದು ನೆಹರು ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಮೇಶ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ತೋಟಗಾರಿಕೆ ಇಲಾಖೆಯ ಸಿಬ್ಬಂದಿಯಾಗಿರುವ ರಮೇಶ್, ಅತ್ಯುತ್ತಮ ಸೇವೆಗೈದ (ಸಾಧನೆಗೈದ) ನಾಗರೀಕ ಸ್ನೇಹಿ, ಗುಣತ್ಮಕ ಭ್ರಷ್ಠಾಚಾರ ರಹಿತ ಕಾರ್ಯವೆಸಗಿದ್ದಾರೆ.