×
Ad

ಸುಳ್ಯ: ಅನಧಿಕೃತ ಬ್ಯಾನರ್ ತೆರವು

Update: 2016-02-03 20:03 IST

ಸುಳ್ಯ: ನಗರ ಪಂಚಾಯತ್ ಅಧಿಕಾರಿಗಳು ಸುಳ್ಯ ನಗರದಾದ್ಯಂತ ಅನಧಿಕೃತ ಬ್ಯಾನರ್ ಹಾಗೂ ಫಲಕಗಳನ್ನು ತೆರವುಗೊಳಿಸಿದ್ದಾರೆ.

ರಸ್ತೆ ಬದಿಯ ಫುಟ್‌ಪಾತ್ ಮೇಲೆ ಇದ್ದ ಅಂಗಡಿಗಳ ಜಾಹೀರಾತು ಫಲಕಗಳು ಹಾಗೂ ಬ್ಯಾನರ್‌ಗಳಿಂದ ಸಾರ್ವಜನಿಕರಿಗೆ ಫುಟ್‌ಪಾತ್ ಮೇಲೆ ನಡೆದಾಡಲು ತೊಂದರೆಯಾಗುತ್ತಿರುವುದಾಗಿ ದೂರುಗಳು ಬಂದಿತ್ತು. ಇದನ್ನರಿತ ನ.ಪಂ. ಅಧ್ಯಕ್ಷ ಪ್ರಕಾಶ್ ಹೆಗ್ಡೆ, ಮುಖ್ಯಾಧಿಕಾರಿ ಎಂ.ಆರ್.ಸ್ವಾಮಿ, ಹಾಗೂ ಸಿಬ್ಬಂದಿಗಳು ಬೆಳ್ಳಂಬೆಳಗ್ಗೆ ಆರು ಗಂಟೆ ಸುಮಾರಿಗರ ಧಿಡೀರ್ ದಾಳಿ ನಡೆಸಿ ರಸ್ತೆಯ ಅಕ್ಕಪಕ್ಕದಲ್ಲಿ ಹಾಕಲಾಗಿದ್ದ ಅನಧಿಕೃತ ಬ್ಯಾನರ್ ಹಾಗೂ ಫಲಕಗಳನ್ನು ತೆರವುಗೊಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News