ಕಿನ್ನಿಗೋಳಿ: ಅನುಮಾನಾಸ್ಪದವಾಗಿ ಬೈಕ್ ನಲ್ಲಿ ಸುತ್ತಾಡುತ್ತಿದ್ದವರ ಬಂಧನ
ಕಿನ್ನಿಗೋಳಿ, ಫೆ.4: ಇಲ್ಲಿನ ಪೇಟೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಬೈಕ್ ನಲ್ಲಿ ಸುತ್ತಾಡುತ್ತಿದ್ದ ಇಬ್ಬರ ಪೈಕಿ ಒಬ್ಬನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಬುಧವಾರ ನಡೆದಿದೆ.
ಘಟನೆಯ ವಿವರ: ನಿನ್ನೆ ಸಂಜೆ ತಮಿಳುನಾಡು ರಿಜಿಸ್ಟ್ರೇಶನ್ ಹೊಂದಿರುವ ಬೈಕ್ ನಲ್ಲಿ ಇಬ್ಬರು ತಮಿಳುನಾಡು ಮೂಲದ ವ್ಯಕ್ತಿಗಳು ಕಿನ್ನಿಗೋಳಿ ಪರಿಸರದಲ್ಲಿರುವ ಕೆಲವು ಚಿನ್ನಾಭರಣದ ಅಂಗಡಿಗಳಲ್ಲಿ ಬೆಲೆ ವಿಚಾರಿಸುತ್ತಿದ್ದರು ಎನ್ನಲಾಗಿದ್ದು, ಅನುಮಾನ ಗೊಂಡ ಸ್ಥಳೀಯರು ವಿಚಾರಿಸಿ, ಹಿಂಬಾಲಿಸಿ ಕೊಂಡು ಹೋಗಿ ಹಿಡಿಯಲು ಪ್ರಯತ್ನಿಸಿದ್ದು, ಓರ್ವ ಪರಾರಿಯಾಗಿದ್ದು ಮತ್ತೋರ್ವನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಮೊದಲು ಕಿನ್ನಿಗೋಳಿ ಸೊಸೈಟಿ ಬ್ಯಾಂಕ್ ನಲ್ಲಿ ಸುಮಾರು 5 ಕೋಟಿ ರೂ. ಬೆಳೆಬಾಳುವ ಚಿನ್ನಾಭರಣಗಳ ಕೆಲವು ನಡೆದಿತ್ತು. ಈ ಪ್ರಕರಣದಲ್ಲಿ ತಮಿಳುನಾಡು ಮೂಲದವರು ಭಾಗಿಯಾಗಿರುವ ಗುಮಾನಿ ಇದ್ದ ಕಾರಣ ಸಂಸಯಗೊಂಡ ಸ್ಥಳೀಯರು ಕಾರ್ಯಾಚರಣೆ ನಡೆಸಿ ಓರ್ವನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.