×
Ad

ಮಂಗಳೂರು : ಕಾಲೇಜಿನ ವಿದ್ಯಾರ್ಥಿನಿಯರಿಬ್ಬರು ನಾಪತ್ತೆ - ಪತ್ತೆಗೆ ಮನವಿ

Update: 2016-02-03 22:39 IST

ಮಂಗಳೂರು, ಫೆ. 3: ನಗರದ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿನಿಯರಿಬ್ಬರು ನಾಪತ್ತೆಯಾಗಿರುವ ಬಗ್ಗೆ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಚಿಲಿಂಬಿಯ ನಿವಾಸಿ ಜಾನ್ ಡೇಸಾ ಎಂಬವರ ಪುತ್ರಿ ಅಲೋಶಿಯಸ್ ಕಾಲೇಜಿನ ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಜಾಕ್ಲಿನ್ (17) ಹಾಗೂ ಸುರತ್ಕಲ್‌ನ ಸಮೀಪದ ನಿವಾಸಿ ಲಕ್ಷ್ಮೀಧರ ಎಂಬವರ ಪುತ್ರಿ ಸ್ಮತಿ (17) ಎಂಬವರು ನಾಪತ್ತೆಯಾಗಿದ್ದಾರೆ.

ಫೆಬ್ರವರಿ 1ರಂದು ಬೆಳಗ್ಗೆ ಕಾಲೇಜಿನ ತೆರಳಿದವರು ಮನೆಗೆ ವಾಪಸ್ಸಾಗದೆ ಕಾಣೆಯಾಗಿದ್ದಾರೆ. ಇವರನ್ನು ಯಾರೋ ಎಲ್ಲಿಗೋ ಕರೆದುಕೊಂಡು ಹೋಗಿರಬೇಕು ಅಥವಾ ಯಾರಾದರು ಪುಸಲಾಯಿಸಿ ಕರೆದೊಯ್ದಿರಬೇಕೆಂದು ಜಾನ್ ಡೇಸಾ ಉತ್ತರ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
 ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಪೊಲೀಸ್ ಆಯುಕ್ತರು 0824 2220801 ಅಥವಾ ಪೊಲೀಸ್ ನಿರೀಕ್ಷಕರು 0824 220516, 9480805338 ಅಥವಾ ಉಪ ನಿರೀಕ್ಷಕರು 9480805345 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಪೊಲೀಸ್ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News