ಕಾಸರಗೋಡು : ಫಾತಿಮ್ಮತ್ ಜುಹರಾ ಕೊಲೆ ಪ್ರಕರಣ ಆರೋಪಿ ಉಮ್ಮರ್ ಬ್ಯಾರಿ ತಪ್ಪಿತಸ್ಥ - ನ್ಯಾಯಾಲಯ
Update: 2016-02-04 17:01 IST
ಕಾಸರಗೋಡು : ಕುಂಬಳೆ ಉಳುವಾರಿನ ಫಾತಿಮ್ಮತ್ ಜುಹರಾ (18) ಳ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ಉಮ್ಮರ್ ಬ್ಯಾರಿ (44) ತಪ್ಪಿತಸ್ಥನೆಂದು ಕಾಸರಗೋಡು ಜಿಲ್ಲಾ ನ್ಯಾಯಾಲಯ ತೀರ್ಫು ನೀಡಿದೆ.
ಶಿಕ್ಷೆ ಪ್ರಮಾಣ ಫೆಬ್ರವರಿ ಎಂಟರಂದು ಘೋಷಿಸಲಿದೆ
ಪ್ರೆಮಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ೨೦೦೮ ರ ಡಿಸೆಂಬರ್ ೨೮ ರಂದು ಕುಂಬಳೆ ಸಮೀಪದ ಉಜಾರು ಉಳುವಾರಿನ ಫಾತಿಮತ್ ಜುಹಾರನ್ನುಆರೋಪಿ ಉಮ್ಮರ್ ಬ್ಯಾರಿ ಕತ್ತು ಹಿಸುಕಿ ಕೊಲೆಗೈದು ಪರಾರಿಯಾಗಿದ್ದ. ಬಳಿಕ ಪೊಲೀಸರ ಕ್ಷಿಪ್ರ ಕಾರ್ಯಾಚರಣೆಯಿಂದ ಆತನನ್ನು ಘಟನೆ ನಡೆದ ಮರುದಿನವೆ ಬಂಧಿಸಲಾಗಿತ್ತು. ಆದ್ರೆ, ನ್ಯಾಯಾಂಗ ಬಂಧನದಲ್ಲಿದ್ದ ಈತ ಜಾಮೀನು ಪಡೆದು ಹೊರಬಂದ ಬಳಿಕ ಕೋರ್ಟ್ ಗೆ ಹಾಜರಾಗದೆತಲೆಮರೆಸಿಕೊಂಡಿದ್ದನು. ತದನಂತರ ೨೦೧೪ ರ ಅಗಸ್ಟ್ ೨೮ ರಂದು ಈತನನ್ನು ಮಹಾರಾಷ್ಟ್ರದ ನಾಸಿಕ್ ನಿಂದ ಬಂಧಿಸಲಾಗಿತ್ತು