ಕಣಚೂರು ಕಾಲೇಜಿನಲ್ಲಿ ಸ್ವಚ್ಚತೆಯ ಅರಿವು ಕಾರ್ಯಕ್ರಮ
Update: 2016-02-04 17:22 IST
ಕೊಣಾಜೆ: ದೇರಳಕಟ್ಟೆಯ ಕಣಚೂರು ಶಿಕ್ಷಣ ಸಂಸ್ಥೆಯ ರಾಷ್ಟ್ರೀಯ ಸೇವಾ ಯೋಜನೆಯ ಘಟಕದ ನೇತೃತ್ವದಲ್ಲಿ ಸ್ವಚ್ಚತೆಯ ಅರಿವು ಮತ್ತು ಸ್ವಚ್ಚತಾ ಕಾರ್ಯಕ್ರ ಇತ್ತೀಚೆಗೆ ನಡೆಯಿತು.
ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ.ಇಕ್ಬಾಲ್ ಅಹಮ್ಮದ್ ಯು.ಟಿ. ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ಪರಿಸರವನ್ನು ಸ್ವಚ್ಚವಾಗಿಸುವ ಬಗ್ಗೆ ಪ್ರಮಾಣವಚನ ಸ್ವೀಕರಿಸಿದರು. ಬಳಿಕ ವಿದ್ಯಾರ್ಥಿಗಳು ಪರಿಸರವನ್ನು ಸಂರಕ್ಷಿಸುವ ಘೋಷಣಾ ಫಲಕಗಳೊಂದಿಗೆ ಜಾಥಾದಲ್ಲಿ ಪಾಲ್ಗೊಂಡು ಕಣಚೂರು ವೃತ್ತದಲ್ಲಿ ಮಾನವ ಸರಪಳಿಯನ್ನು ನಿರ್ಮಿಸಿ ಪರಿಸರ ಮಾಲಿನ್ಯದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಎನ್‌ಎಸ್‌ಎಸ್ ಯೋಜನಾಧಿಕಾರಿಯಾದ ಜೀವನ್ ರಾಜ್, ಸಹ ಯೋಜನಾಧಿಕಾರಿ ಸುಜಾತ, ನಿರ್ಮಲ, ಉಪನ್ಯಾಸಕರುಗಳಾದ ಅವಿನಾಶ್, ಸರಿತಾ ಹಾಗೂ ಎನ್‌ಎಸ್‌ಎಸ್ ಘಟಕದ ನಾಯಕರುಗಳಾದ ಮಿಶ್ರಿಯಾ, ಫಾತಿಮತ್ ಅಫ್ರ, ರೋಶ್ಮಿ, ಮನಿಶಾ, ಭವ್ಯ, ನಿಶಾ ಇನ್ನಿತರರು ಉಪಸ್ಥಿತರಿದ್ದರು.