ಸುರತ್ಕಲ್: ಆಕ್ಟ್ರಸ್ ಪ್ರೀಮಿಯರ್ ಲೀಗ್ 2016 ಹೊನಲು ಬೆಳಕಿನ ಕ್ರೀಡಾ ಕೂಟ ಉದ್ಘಾಟನೆ
Update: 2016-02-04 17:42 IST
ಸುರತ್ಕಲ್: ಇಲ್ಲಿನ ಕೃಷ್ಣಾಪುರ ಆಕ್ಟ್ರಸ್ ಗೈಸ್ ತಂಡದ ವತಿಯಿಂದ ಕೃಷ್ಣಾಪುರ ಫಿಝಾ ಮೈದಾನದಲ್ಲಿ ಆಯೋಜಿಸಿದ್ದ ಆಕ್ಟ್ರಸ್ ಪ್ರೀಮಿಯರ್ ಲೀಗ್ 2016 ಹೊನಲು ಬೆಳಕಿನ ಕ್ರೀಡಾ ಕೂಟವನ್ನು ಮಂಗಳೂರು ಉತ್ತರ ವಲಯ ಶಾಸಕ ಮೊಯ್ದಿನ್ ಬಾವಾ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಕ್ರೀಡೆ ಸೌಹಾರ್ಧತೆ ಹಾಗೂ ಸಹೋದರತೆಯ ಸೇತುವೆಯಾಗ ಬೇಕು. ಕ್ರೀಡೆಗೆ ಅಂತಹಾ ಗುಣ ಇದೆ ಅದರ ಸದುಪಯೋಗ ಮಾಡಿಕೊಳ್ಳುವ ಮನಸ್ಸು, ಉತ್ಸಾಹ ನಮ್ಮಲ್ಲಿರಬೇಕು ಎಂದರು.
ಸಾಮಾರಂಭದ INTUC ಯ ಪ್ರಧಾನ ಕಾರ್ಯದರ್ಶಿ ಅಬೂಬಕರ್ ಅಧ್ಯಕ್ಷತೆ ವಹಿಸಿದ್ದರು. ಸುರತ್ಕಲ್ ವೃತ್ತ ನಿರೀಕ್ಷಕ ಚೆಲುವರಾಜ್, ಕಾರ್ಪೊರೇಟರ್ ಅಯಾಝ್, ಅಲ್ ಬದ್ರಿಯಾ ವಿದ್ಯಾ ಸಂಸ್ಥೆಯ ಅಧ್ಯಕ್ಷ ಶರೀಫ್ M.S., ಮಯೂರ್ ಉಲ್ಲಾಲ್, ಅಬೂಬಕರ್ ಕನ್ನಡನಾಡು, A.K. ಆರಿಸ್, ಅಂಬೆ ಇಲೆಕ್ಟ್ರಿಕಲ್ಸ್ ಮಾಲಕ ಖೇತ್ ಸಿಂಗ್, ಪ್ಯಾರಡೈಸ್ ಕ್ಲಬ್ ನ ಅಧ್ಯಕ್ಷ ಅಬೂಬಕರ್, ಸಂಸ್ಥೆಯ ಅಧ್ಯಕ್ಷ S.M. ಅಲಿ ಮೊದಲಾದವರು ಉಪಸ್ಥಿತರಿದ್ದರು.