×
Ad

ಸುಳ್ಯ : ಶಾಂತಿ, ಸುವ್ಯವಸ್ಥಿತ ಮತದಾನಕ್ಕೆ ಸುಳ್ಯ ಚುನಾವಣಾಧಿಕಾರಿ ಅರುಣಪ್ರಭ ಮನವಿ

Update: 2016-02-04 17:45 IST

ಸುಳ್ಯ: ತಾ.ಪಂ. ಜಿ.ಪಂ. ಚುನಾವಣೆಯ ಹಿನ್ನಲೆಯಲ್ಲಿ ಪೂರ್ವಭಾವಿ ಸಭೆ ತಾಲೂಕು ಕಛೇರಿಯಲ್ಲಿ ನಡೆಯಿತು. ಸಭೆಯ ನೇತೃತ್ವ ವಹಿಸಿದ ಜಿಲ್ಲಾ ಪಂಚಾಯತ್ ಚುನಾವಣಾಧಿಕಾರಿ ಅರುಣ್ ಪ್ರಭ ಮಾತನಾಡಿ, ಚುನಾವಣೆಗೆ ತಾಲೂಕು ಆಡಳಿತ ಸಿದ್ದವಾಗಿದ್ದು, ಯಾವುದೇ ಗೊಂದಲಕ್ಕೆ ಎಡೆಮಾಡಿಕೊಡದಂತೆ ಎಲ್ಲರೂ ಸಹಕರಿಸಬೇಕೆಂದರು. ಚುನಾವಣಾ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು. ಉಡಾಪೆಯಿಂದ ವರ್ತಿಸಿದರೆ ಅಧಿಕಾರಿಗಳ ಮೇಲೂ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು. ತಾ.ಪಂ. ಚುನಾವಣಾಧಿಕಾರಿ ಅನಂತ ಶಂಕರ್, ಸಹಾಯಕ ಚುನಾವಣಾಧಿಕಾರಿ ಚಂದ್ರಶೇಖರ ಪೇರಾಲು, ಸುಳ್ಯ ಎಸ್.ಐ. ಚಂದ್ರಶೇಖರ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು. ಬಿ.ಜೆ.ಪಿ. ಮುಖಂಡರಾದ ಉಮೇಶ್ ವಾಗ್ಲೆ, ಸುದರ್ಶನ್ ಪಾತಿಕಲ್ಲು, ಕಾಂಗ್ರೆಸ್ ಮುಖಂಡ ಪಿ.ಎಸ್.ಗಂಗಾಧರ್, ಜೆ.ಡಿ.ಎಸ್. ಮುಖಂಡರಾದ ಪ್ರವೀಣ್ ಮುಂಡೋಡಿ, ರಾಮಚಂದ್ರ ಬಳ್ಳಡ್ಕ ಸಭೆಯಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News