ಕರ್ಲಪ್ಪಾಡಿ ಶಾಸ್ತಾವೇಶ್ವರ ದೇವಸ್ಥಾನ ಬ್ರಹ್ಮಕಲಶೋತ್ಸವ-ಆಮಂತ್ರಣ ಪತ್ರ ಬಿಡುಗಡೆ
Update: 2016-02-04 17:47 IST
ಸುಳ್ಯ: ಕರ್ಲಪ್ಪಾಡಿ ಶ್ರೀಶಾಸ್ತಾವೇಶ್ವರ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಶ್ರೀ ಗಣಪತಿ ಪ್ರತಿಷ್ಠೆ ಫೆ.20 ರಿಂದ 25ರವರೆಗೆ ನಡೆಯಲಿದೆ.
ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಕರ್ಲಪ್ಪಾಡಿ ದೇವಸ್ಥಾನದಲ್ಲಿ ನಡೆಯಿತು. ಆಮಂತ್ರಣ ಪತ್ರಿಕೆಯನ್ನು ಮೇನಾಲದ ಪದ್ಮನಾಭ ಸ್ವಾಮೀಜಿಯವರು ಬಿಡುಗಡೆಗೊಳಿಸಿದರು. ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಧನಂಜಯ ಅಡ್ಪಂಗಾಯರು ಕಾರ್ಯಕ್ರಮದ ಕುರಿತು ಪತ್ರಕರ್ತರಿಗೆ ವಿವರ ನೀಡಿದರು
ದೇವಳದ ಮೊಕ್ತೇಸರ ಮುದ್ದಪ್ಪ ಗೌಡ ಕರ್ಲಪ್ಪಾಡಿ, ಅರ್ಚಕರಾದ ಸುಬ್ರಹ್ಮಣ್ಯ ನೆಲ್ಲಿತಾಯ, ರೂಪಾನಂದ ಕರ್ಪ್ಪಾಡಿ, ಸುಕುಮಾರ ಕೋಡ್ತುಗುಳಿ, ಜಗನ್ನಾಥ ರೈ ಪಡ್ಡಯೈ ಬನ, ಹೇಮಂತ್ ಕುಮಾರ್, ರಮೇಶ ಇರಂತಮಜಲು, ಮೋನಪ್ಪ ಗೌಡ ನಾರಾಲು, ವಿಜಯ ಮೇನಾಲ, ನಾಗರಾಜ ಮುಳ್ಯ, ಕರುಣಾಕರ ಅಡ್ಪಂಗಾಯ, ಮಂಜುನಾಥ ಪೇರಾಲು, ವೀರಯ್ಯ ಗೌಡ ಪಡ್ಡಂಬೈಲು, ಅನಿಲ್ ರಾಜ್ ಕರ್ಪ್ಪಾಡಿ ಹಾಗೂ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.