×
Ad

ಮತ್ತೆ ಪ್ರಾರಂಭವಾಗಲಿದೆ ಕಪಿಲ್ ಶರ್ಮ ಶೋ

Update: 2016-02-04 18:19 IST

ಮತ್ತೆ ಪ್ರಾರಂಭವಾಗಲಿದೆ ಕಪಿಲ್ ಶರ್ಮ ಶೋ 

ಮುಂಬೈ, ಫೆ. 4: ಖ್ಯಾತ ಸ್ಟಾಂಡ್ ಅಪ್ ಕಾಮಿಡಿಯನ್  ಕಪಿಲ್ ಶರ್ಮ ಅವರ ಅಭಿಮಾನಿಗಳಿಗೆ ಶುಭ ಸುದ್ದಿ ಬಂದಿದೆ. ಮೂಲಗಳ ಪ್ರಕಾರ ೨೦೧೬ ರ ಮಧ್ಯ ಭಾಗದಲ್ಲಿ ಹೊಸ ಶೋದೊಂದಿಗೆ ಕಪಿಲ್ ಶರ್ಮ ಕಿರುತೆರೆಗೆ ಹಿಂದಿರುಗಲಿದ್ದಾರೆ. ಸೋನಿ ವಾಹಿನಿಯಲ್ಲಿ ಪ್ರಸಾರವಾಗುವ ಈ ಹೊಸ ಶೋಗೆ ಕಾಮಿಡಿ ಸ್ಟೈಲ್ ಎಂದು ಹೆಸರಿಡಲಾಗಿದೆ. ಇದರಲ್ಲಿ ಕಪಿಲ್ ತಂಡದ ಖ್ಯಾತ ಪಾತ್ರಧಾರಿಗಳಾದ ದಾದಿ ,ಗುತ್ತಿ ಹಾಗು ಪಲಕ್ ಕೂಡ ಹೊಸ ಶೋದಲ್ಲಿರುತ್ತಾರೆ. 

ಕಾಮಿಡಿ ನೈಟ್ಸ್ ವಿದ್ ಕಪಿಲ್ ಪ್ರಸಾರವಾಗುತ್ತಿದ್ದ ಕಲರ್ಸ್ ವಾಹಿನಿಯಲ್ಲಿ ಕಳೆದ ವಾರಾಂತ್ಯದಲ್ಲಿ ಅವರ ಹೊಸ ಶೋ ಕೃಷ್ಣಾ ಅಭಿಷೇಕ್ ನಡೆಸಿಕೊಡುವ  ಕಾಮಿಡಿ ನೈಟ್ ಲೈವ್ ನ ಪ್ರಥಮ ಎಪಿಸೋಡ್ ಪ್ರಸಾರವಾಗಿದೆ. ಆದರೆ ಇದಕ್ಕೆ ವೀಕ್ಷಕರಿಂದ ನಿರೀಕ್ಷಿತ ಪ್ರತಿಕ್ರಿಯೆ ಬಂದಿಲ್ಲ ಎಂದು ಹೇಳಲಾಗುತ್ತಿದೆ. ಮತ್ತೆ ಕಪಿಲ್ ಬರಲಿ ಎಂದು ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲೂ ಅಭಿಪ್ರಾಯ ವ್ಯಕ್ತ ಪಡಿಸುತ್ತಿದ್ದಾರೆ. 

ಕಪಿಲ್ ಶೋನಲ್ಲಿದ ಇನ್ನೊಬ್ಬ ಪ್ರಮುಖ ಪಾತ್ರ ಗುತ್ತಿ ಪಾತ್ರಧಾರಿ ಸುನಿಲ್  ಗ್ರೋವರ್  ಇತ್ತೀಚಿಗೆ ಟ್ವಿಟ್ಟರ್ ನಲ್ಲಿ ಚಿತ್ರವೊಂದನ್ನು ಹಾಕಿ " ನನಗೆ ಬೇಗ ಮೇಕಪ್ ಮಾಡಿಸಬೇಕು. ಮಾನ್ಸೂನ್ ಗೆ ಮೊದಲು ಶೀಘ್ರ ಭೇಟಿಯಾಗೋಣ  " ಎಂದು ಬರೆದಿರುವುದು ಮೇಲಿನ ಸುದ್ದಿಗೆ ಪುಷ್ಠಿ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News