ತಂದೆ ಮಗನ ಸರಕಾರವನ್ನು ಕಿತ್ತು ಹಾಕುವೆನು ; ಉವೈಸಿ ಗುಡುಗು
ಫೈಝಾಬಾದ್: ಉತ್ತರ ಪ್ರದೇಶದ ಫೈಝಾಬಾದ್‌ನಲ್ಲಿ ತನ್ನ ಮೊದಲ ಉಪ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತಾಡಿದ ಆಲ್ ಇಂಡಿಯ ಮಜ್ಲಿಸ್-ಇತ್ತೇಹಾದುಲ್ ಮುಸ್ಲಿಮೀನ್‌ನ ಮುಖಂಡ ಅಸದುದ್ದೀನ್ ಉವೈಸಿ ಮುಲಾಯಮ್ ಸಿಂಗ್ ಯಾದವ್ ಮತ್ತು ಅಖಿಲೇಶ್ ಯಾದವ್ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಂದೆ ಮಗ ಇಬ್ಬರು ನಾಟಕವಾಡುತ್ತಿದ್ದಾರೆ. ಮೊದಲ ದಿನ ತಂದೆ ತನ್ನ ಮಗ ಕೆಲಸ ಮಾಡುತ್ತಿಲ್ಲ ಎಂದು ಹೇಳಿದರೆ ಮರುದಿನ ಮಗ ತನ್ನ ಸರಕಾರ ಬಹಳ ಉತ್ತಮವಾಗಿ ನಡೆಯುತ್ತಿದೆ ಎನ್ನುತ್ತಾರೆ. ಆದ್ದರಿಂದ 2017ರಲ್ಲಿ ಉತ್ತರ ಪ್ರದೇಶದಲ್ಲಿ ಯಾವುದೇ ತಂದೆ- ಮಗನ ಸರಕಾರ ಇರುವುದಿಲ್ಲ ಎಂದು ಉವೈಸಿ ಗುಡುಗಿದ್ದಾರೆ. ಎಐಎಂಐಎಂ ಬಿಕಾಪುರ್ ಕ್ಷೇತ್ರದಲ್ಲಿ ಪ್ರದೀಪ್ ಕುಮಾರ್‌ರನ್ನು ತನ್ನ ಉಮೇದುವಾರನನ್ನಾಗಿ ಮಾಡಿದೆ.
ಪ್ರದೀಪ್ ಕುಮಾರ್ ದಲಿತ ಸಮುದಾಯದವರಾಗಿದ್ದು ಜನರಲ್ ಸೀಟ್‌ನಲ್ಲಿ ದಲಿತರನ್ನು ನಿಲ್ಲಿಸುವುದೇಕೆ ಎಂಬ ಪ್ರಶ್ನೆಗೆ ಉತ್ತರಿಸಿದ ಉವೈಸಿ ಅಂಬೇಡ್ಕರ್ ಚುನಾವಣೆಗೆ ನಿಂತಾಗ ಮುಸ್ಲಿಮರು ಬೆಂಬಲಿಸಿದ್ದರು ಎಂದು ಹೇಳಿದರು. ಎರಡು ಸಮುದಾಯವನ್ನು ಹಕ್ಕು ವಂಚಿತಗೊಳಿಸಲಾಗಿದೆ. ಸಮಾಜವಾದಿ ಪಾರ್ಟಿ ಆಳ್ವಿಕೆಯಲ್ಲಿ ಮುಸ್ಲಿಮರ ವಿರುದ್ಧ ದಂಗೆ ನಡೆದಿದೆ ಎಂದೂ ಅವರು ಸೂಚಿಸಿದರು. ಬಿಕಾಪುರ್, ಸಹಾರನ್‌ಪುರ್‌ನ ದೇವ್‌ಬಂದ್ ಮತ್ತು ಮುಝಪ್ಫರ್ ನಗರ್‌ನಲ್ಲಿ ಈಗ ಉಪ ಚುನಾವಣೆ ನಡೆಯುತ್ತಿದೆ. ಉತ್ತರ ಪ್ರದೇಶದಲ್ಲಿ 2017ರಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು ಈ ನಿಟ್ಟಿನಲ್ಲಿ ಈಗ ನಡೆಯಲಿರುವ ಉಪಚುನಾವಣೆ ಮಹತ್ವವನ್ನು ಪಡೆದುಕೊಂಡಿದೆ. ದಾದ್ರಿ ಹಿಂಸೆ ಮತ್ತು ಹೈದರಾಬಾದ್ ದಲಿತ ವಿದ್ಯಾರ್ಥಿ ರೋಹಿತ್ ವೇಮುಲಾರ ಆತ್ಮಹತ್ಯೆಯನ್ನು ಪ್ರಸ್ತಾವಿಸಿದ ಉವೈಸಿ ಅಕ್ಲಾಕ್ ಹತ್ಯೆ ಮುಸ್ಲಿಮ್ ಎಂಬ ಕಾರಣಕ್ಕಾಗಿ ನಡೆದಿದೆ ಎಂದರು. ಅಖಿಲೇಶ್ ಯಾದವ್‌ರಿಗೆ ಈ ಮುಖ್ಯಮಂತ್ರಿ ತನ್ನ ಕುರ್ಚಿ ಕಳೆದುಕೊಳ್ಳಬೇಕಾದಿತೆಂಬ ಕಾರಣಕ್ಕಾಗಿ ನೋಯಿಡಾಕ್ಕೆ ಹೋಗಿಲ್ಲ. ಇದು ಒಬ್ಬ ಪ್ರಗತಿ ಪರ ನಾಯಕನ ಚಿಂತನೆಯಲ್ಲ ಎಂದು ಕುಟುಕಿದ್ದಾರೆ. ರೋಹಿತ್ ವೇಮುಲಾ ಆತ್ಮಹತ್ಯೆ ಮಾಡಿಕೊಂಡಿರುವುದು ಶೈಕ್ಷಣಿಕ ಸಂಸ್ಥೆಗಳಲ್ಲಿ ದಲಿತರನ್ನು ದಮನಿಲಾಗುತ್ತಿದೆ ಎಂಬ ಕಾರಣಕ್ಕಾಗಿದ್ದು ಲಕ್ನೋದಲ್ಲಿ ಮೋದಿ ಭಾಷಣ ಮಾಡುತ್ತ ಬಾವುಕರಾದರು. ಮುಗಲ್ ಎ ಅಝಮ್ ಸಿನೆಮಾದ ಯಾವುದೋ ಒಂದು ದೃಶ್ಯದಂತಿತ್ತು ಇದು ಎಂದು ಹೇಳಿದರು. ಇಟ್ಟಿಗೆ ಮತ್ತು ಕಲ್ಲಿನಿಂದ ಉತ್ತರಿಸಲಾಗುವುದು ಎಂದು ಹೇಳುತ್ತಿದ್ದಾಗಲೇ ಅತ್ತ ಮೋದಿಜಿ ಮತ್ತು ನವಾರ್ ಶರೀಪ್ ಹಿಂದೆಂದೋ ಅಗಲಿದ್ದ ಸಹೋದರರಂತೆ ಭೇಟಿಯಾಗಿದ್ದರು ಎಂದು ಕುಟುಕಿದ್ದಾರೆ.