ಮಂಗಳೂರು: ಬಹುಜನ ವಿದ್ಯಾರ್ಥಿ ಸಂಘದಿಂದ ಪ್ರತಿಭಟನೆ
ಮಂಗಳೂರು, ಫೆ.4: ಖಾಸಗಿ ಕ್ಷೇತ್ರದಲ್ಲಿ ಒಬಿಸಿ/ಎಸ್‌ಸಿ/ಎಸ್‌ಟಿ ಸಮುದಾಯಗಳಿಗೆ ಮೀಸಲಾತಿ ಜಾರಿಗೊಳಿಸುವಂತೆ ಆಗ್ರಹಿಸಿ ಬಹುಜನ ವಿದ್ಯಾರ್ಥಿ ಸಂಘ-ಕರ್ನಾಟಕದ ವತಿಯಿಂದ ನಿನ್ನ್ನೆ ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯ ವೇಳೆ ಪೊಲೀಸರು ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್ ನಡೆಸಿರುವುದನ್ನು ಖಂಡಿಸಿ ಇಂದು ಸಂಘದ ದ.ಕ. ಜಿಲ್ಲಾ ಘಟಕದಿಂದ ದ.ಕ. ಜಿಲ್ಲಾಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.
ಬೆಂಗಳೂರಿನಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್ ನಡೆಸಿದ ಕಾರಣ ನೂರಾರು ಮಂದಿಗೆ ಗಾಯಗಳಾಗಿವೆ ಮತ್ತು ಹಲವು ಮಂದಿ ಅಸ್ವಸ್ಥರಾಗಿದ್ದಾರೆ. ಅಲ್ಲದೆ 100ಕ್ಕೂ ಅಕ ಮಂದಿಯನ್ನು ಬಂಸಲಾಗಿದೆ. ಬಿವಿಎಸ್‌ನ ಹೋರಾಟವನ್ನು ಹತ್ತಿಕ್ಕುವುದಕ್ಕಾಗಿ ರಾಜ್ಯ ಸರಕಾರ ನಡೆಸಿದ ಈ ದಾಳಿಯನ್ನು ಖಂಡಿಸುವುದಾಗ ಪ್ರತಿಭಟನಾಕಾರರು ಹೇಳಿದರು.
ಇಂದು ಸರಕಾರಿ ವಲಯದಲ್ಲಿ ಉದ್ಯೋಗ ಸೃಷ್ಟಿ ಅವಕಾಶ ಕಡಿಮೆಯಾಗಿದೆ. ಆದರೆ ಖಾಸಗಿ ವಲಯದಲ್ಲಿ ಉದ್ಯೋಗ ಸೃಷ್ಟಿಯಾಗುತ್ತಿದೆ. ಈ ಖಾಸಗಿ ವಲಯದಲ್ಲಿ ಜಾತಿವಾದಿ ಮನಸ್ಸುಗಳು ಉನ್ನತ ಸ್ಥಾನದಲ್ಲಿರುವುದರಿಂದ ವಿದ್ಯಾವಂತ ಎಸ್‌ಸಿ/ಎಸ್‌ಟಿ/ಒಬಿಸಿ ಹಾಗೂ ಧಾರ್ಮಿಕ ಅಲ್ಪಸಂಖ್ಯಾತರಿಗೆ ಈ ವಲಯದಲ್ಲಿ ಉದ್ಯೋಗ ಪಡೆಯುವುದು ಹರಸಾಹಸವಾಗಿದೆ. ಹೀಗಾಗಿ ವಿದ್ಯಾವಂತ ಎಸ್‌ಸಿ/ಎಸ್‌ಟಿ/ಒಬಿಸಿ ಯುವಕರು ರುದ್ಯೋಗಿಗಳಾಗುತ್ತಿದ್ದಾರೆ. ಇದರಿಂದಾಗಿ ಇಂದು ಈ ಸಮುದಾಯಗಳ ಯುವಕರ ಬದುಕು ಆತಂಕಮಯವಾಗಿದೆ. ಹೀಗಾಗಿ ತಕ್ಷಣವೇ ಖಾಸಗಿ ವಲಯದಲ್ಲಿ ಎಸ್‌ಸಿ/ಎಸ್‌ಟಿ/ಒಬಿಸಿ ಹಾಗೂ ಧಾರ್ಮಿಕ ಅಲ್ಪಸಂಖ್ಯಾತ ಮತ್ತು ಮೇಲ್ಜಾತಿಯ ಬಡವರಿಗೂ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸುವ ಸೂಕ್ತ ಕಾನೂನು ರೂಪಿಸಬೇಕೆಂದು ಬಿವಿಎಸ್ ಜಿಲ್ಲಾ ಘಟಕ ಆಗ್ರಹಿಸಿದೆ.
ಪ್ರತಿಭಟನೆಗೆ ದ.ಕ ಮತ್ತು ಉಡುಪಿ ಹಿಂದುಳಿದ ಜಾತಿಗಳ ಒಕ್ಕೂಟ ಉಪಾಧ್ಯಕ್ಷ, ಅಖಿಲ ಭಾರತ ಮೀನುಗಾರರ ಒಕ್ಕೂಟದ ಉಪಾಧ್ಯಕ್ಷ, ಅಹಿಂದ ಜಿಲ್ಲಾಧ್ಯಕ್ಷ ವಾಸುದೇವ ಬೋಳೂರು ಬೆಂಬಲ ಸೂಚಿಸಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿದ ಬಳಕೆದಾರರ ವೇದಿಕೆಯ ಜಿಲ್ಲಾಧ್ಯಕ್ಷರಾದ ಯು. ಪದ್ಮನಾಭ ಶೆಟ್ಟಿ, ಸಮಾಜ ಪರಿವರ್ತನಾ ವೇದಿಕೆಯ ಮುಖಂಡರಾದ ಪಿ.ಡೀಕಯ್ಯ, ಅಚ್ಯುತ್ ಎಸ್. ರವರು ಭಾಗವಹಿಸಿ ಬಿವಿಎಸ್ ಹೋರಾಟಕ್ಕೆ ತಮ್ಮ ಬೆಂಬಲ ಸೂಚಿಸಿದರು.
ಪ್ರತಿಭಟನೆಯಲ್ಲಿ ಬಿವಿಎಸ್ ಜಿಲ್ಲಾ ಮುಖಂಡರಾದ ಸುರೇಶ್ ಪಿ.ಬಿ., ಉದಯ್ ಗೋಳಿಯಂಗಡಿ, ಆದರ್ಶ್, ಚೆನ್ನಪ್ಪ, ರಘುಧರ್ಮಸೇನ್, ಸೌಮ್ಯ, ಮಂಗಳೂರು ಘಟಕದ ಅರುಣ್ ಕುಮಾರ್, ಪುತ್ತೂರಿನ ಕೃಷ್ಣಪ್ಪ ಬಂಬಿಲ, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಜಿಲ್ಲಾ ಕಾರ್ಯದರ್ಶಿ ನಿಜಾಮುದ್ದೀನ್, ಸಾಮಾಜಿಕ ಮುಖಂಡ ದಮ್ಮಾನಂದ ಮೊದಲಾದವರು ಭಾಗವಹಿಸಿದ್ದರು.