×
Ad

ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ" ವಿಶ್ವ ಕ್ಯಾನ್ಸರ್ ದಿನಾಚರಣೆ"

Update: 2016-02-04 19:16 IST

ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವಿಶ್ವ ಕ್ಯಾನ್ಸರ್ ದಿನಾಚರಣೆಯನ್ನು ಶಾರೀರ ರಚನ ಸ್ನಾತಕೋತ್ತರ ವಿಭಾಗದ ಆಶ್ರಯದಲ್ಲಿ ಗುರುವಾರದಂದು ಆಚರಿಸಲಾಯಿತು.

 ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಮುರಳೀಧರ ಶರ್ಮ ಕಾರ್ಯಕ್ರಮವನ್ನು ಉಧ್ಘಾಟಿಸಿ ಕ್ಯಾನ್ಸರ್ ರೋಗದ ಬಗ್ಗೆ ವಿಶೇಷ ಉಪನ್ಯಾಸ ನೀಡಿ ಕ್ಯಾನ್ಸರ್ ರೋಗ, ರೋಗದ ನಿಧಾನ ಲಕ್ಷಣ ಚಿಕಿತ್ಸೆ ಮತ್ತು ಆಯುರ್ವೇದದಲ್ಲಿರುವ ಪರಿಣಾಮಕಾರಿ ಚಿಕಿತ್ಸಾ ಪರಿಕ್ರಮಗಳನ್ನು ವಿವರಿಸಿದರು. ಇಂದಿನ ದಿನಮಾನದಲ್ಲಿನ ನಮ್ಮ ದಿನಚರಿ ಜೀವನ ಶೈಲಿ, ಆಹಾರ ಪದ್ಧತಿ ಹೇಗೆ ಕ್ಯಾನ್ಸರ್ ರೋಗೋತ್ಪಾದಾನೆಗೆ ಹೇಗೆ ಕಾರಣವಾಗುತ್ತದೆ ಮತ್ತು ಆಯುರ್ವೇದೋಕ್ತ ದಿನಚರ್ಯೆ, ಋತುಚರ್ಯೆ ಮತ್ತು ಔಷಧಿಗಳು ಪರಿಣಾಮವನ್ನು ಬೀರುತ್ತದೆ ಎಂಬುದನ್ನು ಅಂಕಿ ಅಂಶಗಳ ಮೂಲಕ ತೆರೆದಿಟ್ಟರು.  ಕಾಲೇಜಿನ ಪ್ರಾಂಶುಪಾಲರಾದ ಡಾ.ವಿನಯಚಂದ್ರ ಶೆಟ್ಟಿ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾಲೇಜಿನ ಸ್ನಾತಕೋತ್ತರ ವಿಭಾಗದ ಡೀನ್ ಡಾ.ಮಂಜುನಾಥ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ಶಾರೀರ ರಚನಾ ವಿಭಾಗದ ಮುಖ್ಯಸ್ಥೆ ಡಾ.ಸ್ವಪ್ನ ವಂದಿಸಿ, ಡಾ.ಪೂಜಾರಾಣಿ ಕೆ.ಪಿಯವರು ಕಾರ್ಯಕ್ರಮವನ್ನು ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News