×
Ad

ಅಮೇರಿಕದ ಕ್ರಾಸ್‌ಕಂಟ್ರಿ ರೇಸ್‌ಗೆ ಕನೀಝಾ ಬೇಗಂ ಆಯ್ಕೆ

Update: 2016-02-04 19:44 IST

ಚಂಬಾ: ಹಿಮಾಚಲದ ಚಂಬಾ ಜಿಲ್ಲೆಯಲ್ಲಿ ಬಡ ರೈತನೊಬ್ಬನ ಪುತ್ರಿ ಕನಿಝಾ ಬೇಗಮ್ ಅದ್ಭುತ ಸಾಧನೆ ಮಾಡಿ ತೋರಿಸಿದ್ದಾಳೆ. ಅಮೇರಿಕದಲ್ಲಿ ನಡೆಯಲಿರುವ ಅಥ್ಲೆಟಿಕ್ಸ್‌ನಲ್ಲಿ ಅವಳು ಭಾಗವಹಿಸಲಿದ್ದಾಳೆ. ಪುಣೆಯಲ್ಲಿ ನಡೆದ ಅಥ್ಲಿಟಿಕ್ಸ್ ಮೀಟ್‌ನಲ್ಲಿ ಕನೀಝಾ ಬೆಳ್ಳಿ ಪದಕ ಗೆದ್ದು ಭಾರತದ ಅಥ್ಲೆಟಿಕ್ಸ್ ತಂಡದಲ್ಲಿ ಸ್ಥಾನ ಗಳಿಸಿಕೊಂಡಿದ್ದಾಳೆ ಎಂದು ವರದಿಯಾಗಿದೆ. ಧರ್ಮಶಾಲದ ಸಾಯಿ ಹಾಸ್ಟೆಲ್‌ನಲ್ಲಿ ಕನೀಝಾ ತರಬೇತಿ ಪಡೆದಿದ್ದಳು. ಕನೀಝಾಳ ತಂದೆ ಮೆಹರದಿ ತನ್ನ ಮಗಳ ಯಶಸ್ಸಿಗೆ ಖುಶಿಗೊಂಡಿದ್ದಾರೆ. ಹತ್ತನೆ ತರಗತಿ ವರೆಗೆ ಶಾಲೆ ಕಲಿತ ಈ ಹುಡುಗಿ ಎರಡು ಸಲ ರಾಷ್ಟ್ರೀಯ ಮಟ್ಟದ ಅಥ್ಲೆಟಿಕ್ಸ್‌ನಲ್ಲಿ ಭಾಗವಹಿಸಿದ್ದಾಳೆ. ಈಗ ಫೆ. 28ಕ್ಕೆ ಅಮೆರಿಕದಲ್ಲಿ ಆರಂಭಗೊಳ್ಳಲಿರುವ ಇಂಟರ್‌ನ್ಯಾಶನಲ್ ಅಥ್ಲೆಟಿಕ್ಸ್ ಗೇಮ್ಸ್‌ನಲ್ಲಿ ಅವಳು ಆಯ್ಕೆ ಆಗಿದ್ದಾಳೆ ಎಂದು ವರದಿಯಾಗಿದೆ. ಬಡ ರೈತ ಮುಸ್ಲಿಂ ಕುಟುಂಬದಿಂದ ಬಂದಿರುವ ಅವಳು ಇಷ್ಟರಲ್ಲೇ ಅಮೆರಿಕ ತೆರಳಲಿದ್ದಾಳೆ. ಮುಖ್ಯಮಂತ್ರಿ ವೀರ ಭದ್ರಸಿಂಗ್ ಯುವ ಕ್ರೀಡಾ ಪಟು ಕನೀಝಾಳನ್ನು ಅಭಿನಂದಿಸಿದ್ದಾರೆ. ಕನೀಝಾ ಅಮೆರಿಕದಲ್ಲಿ ನಡೆಯಲಿರುವ ಕ್ರಾಸ್‌ಕಂಟ್ರಿ ರೇಸ್‌ನಲ್ಲಿ ಭಾಗವಹಿಸಲು ಆಯ್ಕೆಯಾಗಿ ಹಿಮಾಚಲ ಪ್ರದೇಶದ ಹೆಸರನ್ನು ಎತ್ತರಕ್ಕೇರಿಸಿದ್ದಾಳೆಂದೂ ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News