×
Ad

ವಿಟ್ಲ :ಬ್ರದರ್ಸ್‌ ಗುಡ್ಡೆಅಂಗಡಿ ಆಶ್ರಯದಲ್ಲಿ ಹೊನಲು ಬೆಳಕಿನ 8 ಜನರ ಸೂಪರ್ ಸಿಕ್ಸ್ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ

Update: 2016-02-04 20:20 IST

ವಿಟ್ಲ : ಪಾಣೆಮಂಗಳೂರು ಸಮೀಪದ ಬ್ರದರ್ಸ್‌ ಗುಡ್ಡೆಅಂಗಡಿ ಆಶ್ರಯದಲ್ಲಿ ಹೊನಲು ಬೆಳಕಿನ 8 ಜನರ ಸೂಪರ್ ಸಿಕ್ಸ್ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಸೌಹಾರ್ದ ಟ್ರೋಫಿ-2016 ಫೆ 6 ರಂದು ಸಂಜೆ ಮಾರ್ನಬೈಲು ಗಳಿಗಬನ ಮೈದಾನದಲ್ಲಿ ನಡೆಯಲಿದೆ.

        ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಪಂದ್ಯಾಟ ಉದ್ಘಾಟಿಸಲಿದ್ದು, ಜಿ.ಪಂ. ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬುಡಾ ಅಧ್ಯಕ್ಷ ಪಿಯೂಸ್ ಎಲ್ ರೋಡ್ರಿಗಸ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಎಂ. ಅಬ್ಬಾಸ್ ಅಲಿ, ಬಂಟ್ವಾಳ ಭೂ ಅಭಿವೃದ್ದಿ ಬ್ಯಾಂಕ್ ಉಪಾಧ್ಯಕ್ಷ ಸಂಜೀವ ಪೂಜಾರಿ ಬೊಳ್ಳಾಯಿ, ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

      ವಿಜೇತ ತಂಡಗಳಿಗೆ ಪ್ರಥಮ ರೂ. 10,000/-, ದ್ವಿತೀಯ ರೂ. 6,000/- ನಗದು ಹಾಗೂ ಸೌಹಾರ್ದ ಟ್ರೋಫಿ ಅಲ್ಲದೆ ಸರಣಿ ಶ್ರೇಷ್ಠ, ಉತ್ತಮ ದಾಂಡಿಗ, ಉತ್ತಮ ಎಸೆತಗಾರ ವೈಯುಕ್ತಿಕ ಪ್ರಶಸ್ತಿಗಳನ್ನು ನೀಡಲಾಗುವುದು. ಈ ಬಗ್ಗೆ ವಿವರಗಳಿಗೆ ದೂರವಾಣಿ ಸಂಖ್ಯೆ 9731772112 ಅಥವಾ 9972671541ನ್ನು ಸಂಪರ್ಕಿಸುವಂತೆ ಬ್ರದರ್ಸ್‌ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News