×
Ad

ವಿಟ್ಲ : ದಫ್ ಕಲೆಯಲ್ಲಿ ಆಧ್ಯಾತ್ಮಿಕ ತಿರುಳಿದೆ: ಬಸವಲಿಂಗ ಮೂರ್ತಿ ಸ್ವಾಮೀಜಿ

Update: 2016-02-04 20:47 IST

ವಿಟ್ಲ : ದಫ್ ಕಲೆಯು ಮೇಲ್ನೋಟಕ್ಕೆ ಜನಪದೀಯ ನೃತ್ಯದಂತೆ ಕಂಡು ಬಂದರೂ ಇದರ ಒಳ ತಿರುಳು ಆಧ್ಯಾತ್ಮಿಕತೆಯಿಂದ ಕೂಡಿದೆ ಎಂದು ಮೈಸೂರು ಮಹಾಲಿಂಗೇಶ್ವರ ಮಠದ ಶ್ರೀ ಬಸವಲಿಂಗ ಮೂರ್ತಿ ಸ್ವಾಮೀಜಿ ಹೇಳಿದರು. ದಫ್ ಎಸೋಸಿಯೇಶನ್ ದ.ಕ. ಮತ್ತು ಉಡುಪಿ ಜಿಲ್ಲೆ, ಬ್ಯಾರಿ ಸಾಹಿತ್ಯ ಪರಿಷತ್ ಬಂಟ್ವಾಳ ಹಾಗೂ ಕರಾವಳಿ ಟೈಮ್ಸ್ ಪತ್ರಿಕಾ ಬಳಗ ಇವುಗಳ ಸಂಯುಕ್ತ ಆಶ್ರಯದಲ್ಲಿ ಪಾಣೆಮಂಗಳೂರು-ಆಲಡ್ಕ ಮೈದಾನದ ಮರ್‌ಹೂಂ ಸಜಿಪ ಉಸ್ತಾದ್ ನಗರದ ಮರ್‌ಹೂಂ ಕೆ.ಎಂ. ಇಕ್ಬಾಲ್ ಮಾಸ್ಟರ್ ವೇದಿಕೆಯಲ್ಲಿ ನಡೆದ ಹೊನಲು ಬೆಳಕಿನ ದಫ್ ಸ್ಪರ್ಧೆ ಹಾಗೂ ಬಹುಭಾಷಾ ಕವಿಗೋಷ್ಠಿ-2016 ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ದಫ್ ಕಲೆಯು ಸಾರ್ವತ್ರಿಕವಾಗಿ ಪ್ರಚುರಪಡಿಸಬೇಕಾಗಿದ್ದು, ಈ ನಿಟ್ಟಿನಲ್ಲಿ ಸರಕಾರ ಹಾಗೂ ಸಂಘ-ಸಂಸ್ಥೆಗಳ ಉತ್ತೇಜನ ನೀಡಬೇಕಾಗಿದೆ. ಬಹುಭಾಷಾ ಕವಿಗೋಷ್ಠಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ನಾಡಿನಲ್ಲಿ ಶಾಂತಿ-ಸಾಮರಸ್ಯವನ್ನು ಕಾಪಾಡಿಕೊಂಡು ಬರಲು ಸಾಧ್ಯ ಎಂದರು. ಆಲಡ್ಕ ಮುಹಿಯುದ್ದೀನ್ ಜುಮಾ ಮಸೀದಿ ಮುದರ್ರಿಸ್ ಹಾಜಿ ಬಿ.ಎಚ್. ಅಬೂಸ್ವಾಲಿಹ್ ಮುಸ್ಲಿಯಾರ್ ಉದ್ಘಾಟಿಸಿದರು. ರಾಜ್ಯ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅಧ್ಯಕ್ಷತೆ ವಹಿಸಿದ್ದರು.

 ಮುಖ್ಯ ಅತಿಥಿಗಳಾಗಿ ನಂದಾವರ ಕೇಂದ್ರ ಮಸೀದಿ ಖತೀಬ್ ಹಾಜಿ ಎನ್.ಎಚ್. ಆದಂ ಫೈಝಿ, ಸೂಫಿ ಮತ್ತು ಶರಣ ಸಂತರ ಸೇವಾ ಸಮಿತಿಯ ರಾಜ್ಯಾಧ್ಯಕ್ಷ ಖ್ವಾಜಾ ಅಝೀಂ ಅಲಿ ಶಾ ಚಿಸ್ತಿ, ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್, ಜಿ.ಪಂ. ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಎಂ.ಎಸ್. ಮುಹಮ್ಮದ್, ಎನ್.ಎಸ್. ಕರೀಂ, ಮಾಜಿ ಸದಸ್ಯ ಉಮರ್ ಫಾರೂಕ್ ಫರಂಗಿಪೇಟೆ, ಗೋಳ್ತಮಜಲು ಗ್ರಾ.ಪಂ. ಉಪಾಧ್ಯಕ್ಷ ಹಾಜಿ ಕೆ.ಎಸ್. ಮುಸ್ತಫಾ, ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯ ಕಾರ್ಯದರ್ಶಿ ಹನೀಫ್ ಬಗ್ಗುಮೂಲೆ, ಹಿದಾಯ ಫೌಂಡೇಶನ್ ಸಂಚಾಲಕ ಹಾಜಿ ಜಿ. ಮುಹಮ್ಮದ್ ಹನೀಫ್ ಗೋಳ್ತಮಜಲು, ನಿವೃತ್ತ ಉಪ ತಹಶೀಲ್ದಾರ್ ರೋಹಿನಾಥ್, ಕಾರಾಜೆ ಜುಮಾ ಮಸೀದಿ ಅಧ್ಯಕ್ಷ ಹಾಜಿ ಕೆ. ಶೇಖಬ್ಬ, ಆಲಡ್ಕ ಎಂಜೆಎಂ ಅಧ್ಯಕ್ಷ ಬಿ. ಅಬೂಬಕ್ಕರ್ ತ್ರೀಮೆನ್ಸ್, ಕಾರ್ಯದರ್ಶಿ ಹಾಜಿ ಪಿ.ಎಂ. ಉಮ್ಮರಬ್ಬ ಮೊದಲಾದವರು ಭಾಗವಹಿಸಿದ್ದರು. ಬಂಟ್ವಾಳ ಬ್ಯಾರಿ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎಂ. ಅಬ್ಬಾಸ್ ಅಲಿ, ಬಂಟ್ವಾಳ ಆರಾಧನಾ ಸಮಿತಿ ಸದಸ್ಯ ಯೂಸುಫ್ ಕರಂದಾಡಿ, ಇರಾ ಗ್ರಾ.ಪಂ. ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ, ಬಂಟ್ವಾಳ ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯರುಗಳಾದ ಹಮೀದ್ ಗೋಳ್ತಮಜಲು ಹಾಗೂ ಝಕರಿಯ್ಯಾ ಕಲ್ಲಡ್ಕ, ದಫ್ ಎಸೋಸಿಯೇಶನ್ ಸದಸ್ಯರುಗಳಾದ ಕೆ.ಎಂ.ಎ. ಕೊಡುಂಗಾಯಿ, ಜಸೀಂ ಸಜಿಪ, ಆಶಿಕ್ ಕುಕ್ಕಾಜೆ, ನೌಫಲ್ ಕುಡ್ತಮುಗೇರು, ಪ್ರಮುಖರಾದ ಹಾರಿಸ್ ಕಲ್ಲಡ್ಕ, ಝುಬೈರ್ ತಲೆಮೊಗರು, ರಶೀದ್ ವಿಟ್ಲ, ಮೊದಲಾದವರು ಉಪಸ್ಥಿತರಿದ್ದರು. ದಫ್ ಎಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ಪಿ.ಎಂ. ಅಶ್ರಫ್ ಪಾಣೆಮಂಗಳೂರು ಸ್ವಾಗತಿಸಿ, ಯು. ಮುಸ್ತಫಾ ಆಲಡ್ಕ ವಂದಿಸಿದರು. ಲತೀಫ್ ನೇರಳಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ಕವಿಗೋಷ್ಠಿ

ಹುಸೈನ್ ಕಾಟಿಪಳ್ಳ ಅವರ ಅಧ್ಯಕ್ಷತೆಯಲ್ಲಿ ನಡೆದ ಬಹು ಭಾಷಾ ಕವಿಗೋಷ್ಠಿಯಲ್ಲಿ ಕವಿಗಳಾದ ಇಬ್ರಾಹಿಂ ತಣ್ಣೀರುಬಾವಿ, ಚಂದ್ರಶೇಖರ್ ಪಾತೂರು, ರಹೀಂ ಬಿ.ಸಿ.ರೋಡು, ಶರೀಫ್ ನೀರ್ಮುಂಜೆ, ಎ. ಗೋಪಾಲ ಅಂಚನ್, ಅಶ್ರಫ್ ಅಪೋಲೋ ಕಲ್ಲಡ್ಕ, ಡಾ. ಪ್ರಶಾಂತ್ ಕಲ್ಲಡ್ಕ, ರಶೀದ್ ನಂದಾವರ, ಸತ್ತಾರ್ ಗೂಡಿನಬಳಿ, ಪೂವಪ್ಪ ನೇರಳಕಟ್ಟೆ, ಸಲೀಂ ಬೋಳಂಗಡಿ, ಎಂ.ಪಿ. ಬಶೀರ್ ಬಂಟ್ವಾಳ, ವಿಶ್ವನಾಥ ನೇರಳಕಟ್ಟೆ ಕವನ ವಾಚಿಸಿದರು. ಪರ್ಲಡ್ಕ ತಂಡಕ್ಕೆ ದಫ್ ಪ್ರಶಸ್ತಿ ದಫ್ ಸ್ಪರ್ಧಾ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಗರಿಷ್ಠ 36 ತಂಡಗಳು ಭಾಗವಹಿಸಿದ್ದ ಈ ಸ್ಪರ್ಧೆಯಲ್ಲಿ ಪುತ್ತೂರು-ಪರ್ಲಡ್ಕದ ಹಯಾತುಲ್ ಇಸ್ಲಾಂ ದಫ್ ತಂಡ ಪ್ರಥಮ ಸ್ಥಾನವನ್ನು ಪಡೆದುಕೊಂಡರೆ, ಮಂಗಳೂರು-ಆಕಾಶಭವನದ ಸಿ.ಎಂ. ದಫ್ ತಂಡ ದ್ವಿತೀಯ ಹಾಗೂ ಕಾಪು-ಫಕೀರ್ಣಕಟ್ಟೆಯ ಹಿಮಾಯತುಲ್ ಇಸ್ಲಾಂ ದಫ್ ತಂಡ ತೃತೀಯ ಸ್ಥಾನ ಪಡೆದುಕೊಂಡಿತು.

1 : ಕಾರ್ಯಕ್ರಮದಲ್ಲಿ ಬಸವಲಿಂಗ ಸ್ವಾಮೀಜಿ ಮಾತನಾಡಿದರು.

2 : ಕವಿಗೋಷ್ಠಿಯ ದೃಶ್ಯ.

3 : ದಫ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಪರ್ಲಡ್ಕ ಹಯಾತುಲ್ ಇಸ್ಲಾಂ ದಫ್ ತಂಡ.

4 : ದಫ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ಆಕಾಶ ಭವನ ಸಿ.ಎಂ. ದಫ್ ತಂಡ.

5 : ದಫ್ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದ ಫಕೀರ್ಣಕಟ್ಟೆ ಹಿಮಾಯತುಲ್ ಇಸ್ಲಾಂ ದಫ್ ತಂಡ.

6 : ದಫ್ ವೀಕ್ಷಿಸಿದ ಸಚಿವ ರಮಾನಾಥ ರೈ.

7 : ಕಾರ್ಯಕ್ರಮದಲ್ಲಿ ನೆರೆದ ಜನಸ್ತೋಮ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News