ಕಲ್ಲಡ್ಕ ಗಲಭೆ; ಪೊಲೀಸ್ ದೌರ್ಜನ್ಯ: ಎಸ್‌ಡಿಪಿಐ ಖಂಡನೆ
Update: 2016-02-04 21:42 IST
ಬಂಟ್ವಾಳ, ಫೆ. 4: ಕಲ್ಲಡ್ಕದಲ್ಲಿ ನಡೆದ ಅಪಘಾತ ಗುಂಪು ಘರ್ಷಣೆಗೆ ತಿರುಗಿ ಅಮಾಯಕರ ಮೇಲೆ ದಾಳಿ, ಸಾರ್ವಜನಿಕ ಸೊತ್ತುಗಳಿಗೆ ಹಾನಿ ಸಂಭವಿಸಿರುವ ಘಟನೆಯನ್ನುಎಸ್‌ಡಿಪಿಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿಯು ತೀರ್ವವಾಗಿ ಖಂಡಿಸಿದೆ. ಘಟನೆಯ ಬಳಿಕ ಬಂಟ್ವಳ ಎಸ್ಸೈ ಅಮಾಯಕರ ಮೇಲೆ ಸ್ವಯಂ ಪ್ರೇರಿತವಾಗಿ ಕೇಸುಗಳನ್ನು ದಾಖಲಿಸುತಿರುವುದು ಖಂಡನೀಯ ಮತ್ತು ಎಸ್ಸೈ ಅಮಾಯಕರ ಮನೆ ಮೇಲೆ ದಾಳಿ ನಡೆಸಿ ಮನೆಯಲ್ಲಿರುವ ವೃದ್ಧರಿಗೆ ಹಾಗೂ ಮಹಿಳೆಯರಿಗೆ ಮಾನಸಿಕ ಮತ್ತು ದೈಹಿಕ ಕಿರುಕಳವನ್ನು ನೀಡುತ್ತಿರುವುದು ಸ್ಪಷ್ಟ ಮಾನವ ಹಕ್ಕುಗಳ ಉಲ್ಲಂಘನೆಯಾಗಿರುತ್ತದೆ ಎಂದು ಬಂಟ್ವಾಳ ವಿಧಾನಸಭಾಕ್ಷೇತ್ರ ಸಮಿತಿ ಪತ್ರಿಕಾ ಪ್ರಕಟನೆಯಲ್ಲಿ ಆರೋಪಿಸಿದೆ.