×
Ad

ಮಂಗಳೂರು : ಜಿ.ಪಂಗೆ 7, ತಾ.ಪಂ.ಗೆ 17 ನಾಮಪತ್ರ ಸಲ್ಲಿಕೆ

Update: 2016-02-04 22:24 IST

ಮಂಗಳೂರು, ಫೆ. 4: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲೆಯ 5 ತಾಲೂಕು ಪಂಚಾಯತ್‌ಗಳಿಗೆ ಫೆಬ್ರವರಿ 20ರಂದು ನಡೆಯುವ ಚುನಾವಣೆಗೆ ಬುಧವಾರ ಜಿಲ್ಲಾ ಪಂಚಾಯತ್‌ಗೆ ಒಟ್ಟು 7 ನಾಮಪತ್ರಗಳು ಹಾಗೂ ತಾಲೂಕು ಪಂಚಾಯತ್‌ಗೆ 17 ನಾಮಪತ್ರ ಸಲ್ಲಿಕೆಯಾಗಿವೆ.
 ಜಿ.ಪಂ. ಕ್ಷೇತ್ರಗಳಿಗೆ ಬಂಟ್ವಾಳ ತಾಲೂಕಿಗೆ ಬಿಜೆಪಿಯಿಂದ ಹಾಗೂ ಸಿಪಿಎಂನಿಂದ ತಲಾ 1, ಬೆಳ್ತಂಗಡಿ ತಾಲೂಕಿಗೆ ಕಾಂಗ್ರೆಸ್ ಹಾಗೂ ಜೆಡಿಯುನಿಂದ ತಲಾ 1, ಮಂಗಳೂರು ತಾಲೂಕಿಗೆ ಸಿಪಿಐನಿಂದ 1, ಸಿಪಿಎಂನಿಂದ 2 ನಾಮಪತ್ರಗಳು ಸಲ್ಲಿಕೆಯಾಗಿವೆ.
 ತಾಲೂಕು ಪಂಚಾಯತ್ ಕ್ಷೇತ್ರಗಳಿಗೆ ಬೆಳ್ತಂಗಡಿ ತಾಲೂಕಿಗೆ 7, ಬಂಟ್ವಾಳ ತಾಲೂಕಿಗೆ 5, ಮಂಗಳೂರು ತಾಲೂಕಿಗೆ 4 ಹಾಗೂ ಪುತ್ತೂರು ತಾಲೂಕಿಗೆ 1 ನಾಮಪತ್ರಗಳು ಸಲ್ಲಿಕೆಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News