ಮಂಗಳೂರು : ಅಕ್ರಮ ಚಿನ್ನ, ವಿದೇಶಿ ಕರೆನ್ಸಿ, ಸಿಗರೇಟ್ ವಶಕ್ಕೆ
ಮಂಗಳೂರು, ಫೆ. 4: ಅಕ್ರಮವಾಗಿ ಸಾಗಿಸಲೆತ್ನಿಸುತ್ತಿದ್ದ ಚಿನ್ನ, ವಿದೇಶಿ ಕರೆನ್ಸಿ, ವಿದೇಶಿ ಸಿಗರೇಟ್‌ನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ.
ಕಳೆದ ತಿಂಗಳು ರಚನೆಗೊಂಡ ವಿಮಾನ ನಿಲ್ದಾಣದ ಗುಪ್ತಚರ ವಿಭಾಗದ ಅಧಿಕಾರಿಗಳ ತಂಡ ಈ ಕಾರ್ಯಾಚರಣೆ ನಡೆಸಿದೆ.
ದುಬೈನಿಂದ ಬಂದ ಪ್ರಯಾಣಿಕನಿಂದ ಒಟ್ಟು 15.45 ಲಕ್ಷ ವೌಲ್ಯದ 583.250 ಗ್ರಾಂ. ತೂಕದ 10 ಚಿನ್ನದ ಗಟ್ಟಿಗಳನ್ನು ವಶಕ್ಕೆ ಪಡೆದಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ದುಬೈನಿಂದ ಬಂದ ಪ್ರಯಾಣಿಕನಿಂದ 15.33 ಲಕ್ಷ ವೌಲ್ಯದ 581 ಗ್ರಾಂ. ಚಿನ್ನವನ್ನು ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ.
ದುಬೈನಿಂದ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 3,46,785 ರೂ. ಭಾರತೀಯ ವೌಲ್ಯದ 18,500 ಯುಎಇ ದಿರಮ್ ಮತ್ತುರಟ್ಟಿನ ಬಾಕ್ಸೊಂದರಲ್ಲಿ ಸಾಗಿಸಲೆತ್ನಿಸಿದ್ದ 2.04 ಲಕ್ಷ ವೌಲ್ಯದ ವಿದೇಶಿ ಸಿಗರೇಟ್‌ನ್ನೂ ವಶಪಡಿಸಲಾಗಿದೆ ಎಂದು ಕಸ್ಟಮ್ಸ್ ಆಯುಕ್ತ ಡಾ. ಎಂ. ಸುಬ್ರಹ್ಮಣ್ಯಂ ಪ್ರಕಟನೆಯಲ್ಲಿ ತಿಳಿಸಿದ್ದಾರೆ.