×
Ad

ದಫ್ ಕಲೆಯಲ್ಲಿ ಆಧ್ಯಾತ್ಮಿಕ ತಿರುಳಿದೆ: ಬಸವಲಿಂಗ ಮೂರ್ತಿ ಸ್ವಾಮೀಜಿ

Update: 2016-02-04 23:41 IST


ವಿಟ್ಲ, ಫೆ.4: ದಫ್ ಕಲೆಯು ಮೇಲ್ನೋಟಕ್ಕೆ ಜನಪದೀಯ ನೃತ್ಯದಂತೆ ಕಂಡು ಬಂದರೂ ಇದರ ಒಳ ತಿರುಳು ಆಧ್ಯಾತ್ಮಿಕತೆಯಿಂದ ಕೂಡಿದೆ ಎಂದು ಮೈಸೂರು ಮಹಾಲಿಂಗೇಶ್ವರ ಮಠದ ಶ್ರೀ ಬಸವಲಿಂಗ ಮೂರ್ತಿ ಸ್ವಾಮೀಜಿ ಹೇಳಿದರು. ದಫ್ ಅಸೋಸಿಯೇಶನ್ ದ.ಕ. ಮತ್ತು ಉಡುಪಿ ಜಿಲ್ಲೆ, ಬ್ಯಾರಿ ಸಾಹಿತ್ಯ ಪರಿಷತ್ ಬಂಟ್ವಾಳ ಹಾಗೂ ಕರಾವಳಿ ಟೈಮ್ಸ್ ಪತ್ರಿಕಾ ಬಳಗದ ಸಂಯುಕ್ತ ಆಶ್ರಯದಲ್ಲಿ ಪಾಣೆಮಂಗಳೂರು-ಆಲಡ್ಕ ಮೈದಾನದ ಮರ್‌ಹೂಂ ಸಜಿಪ ಉಸ್ತಾದ್ ನಗರದ ಮರ್‌ಹೂಂ ಕೆ.ಎಂ. ಇಕ್ಬಾಲ್ ಮಾಸ್ಟರ್ ವೇದಿಕೆಯಲ್ಲಿ ನಡೆದ ಹೊನಲು ಬೆಳಕಿನ ದಫ್ ಸ್ಪರ್ಧೆ ಹಾಗೂ ಬಹುಭಾಷಾ ಕವಿಗೋಷ್ಠಿ-2016 ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಆಲಡ್ಕ ಮುಹಿಯುದ್ದೀನ್ ಜುಮಾ ಮಸೀದಿಯ ಮುದರ್ರಿಸ್ ಹಾಜಿ ಬಿ.ಎಚ್. ಅಬೂಸ್ವಾಲಿಹ್ ಮುಸ್ಲಿಯಾರ್ ಉದ್ಘಾಟಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ನಂದಾವರ ಕೇಂದ್ರ ಮಸೀದಿ ಖತೀಬ್ ಹಾಜಿ ಎನ್.ಎಚ್. ಆದಂ ಫೈಝಿ, ಸೂಫಿ ಮತ್ತು ಶರಣ ಸಂತರ ಸೇವಾ ಸಮಿತಿಯ ರಾಜ್ಯಾಧ್ಯಕ್ಷ ಖ್ವಾಜಾ ಅಝೀಂ ಅಲಿಶಾ ಚಿಸ್ತಿ, ಆರೋಗ್ಯ ಸಚಿವ ಯು.ಟಿ. ಖಾದರ್, ಜಿಪಂ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಎಂ.ಎಸ್. ಮುಹಮ್ಮದ್, ಎನ್.ಎಸ್. ಕರೀಂ, ಮಾಜಿ ಸದಸ್ಯ ಉಮರ್ ಫಾರೂಕ್ ಫರಂಗಿಪೇಟೆ, ಗೋಳ್ತಮಜಲು ಗ್ರಾಪಂ ಉಪಾಧ್ಯಕ್ಷ ಹಾಜಿ ಕೆ.ಎಸ್. ಮುಸ್ತಫಾ, ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯ ಕಾರ್ಯದರ್ಶಿ ಹನೀಫ್ ಬಗ್ಗುಮೂಲೆ, ಹಿದಾಯ ಫೌಂಡೇಶನ್ ಸಂಚಾಲಕ ಹಾಜಿ ಜಿ. ಮುಹಮ್ಮದ್ ಹನೀಫ್ ಗೋಳ್ತಮಜಲು, ನಿವೃತ್ತ ಉಪ ತಹಶೀಲ್ದಾರ್ ರೋಹಿನಾಥ್, ಕಾರಾಜೆ ಜುಮಾ ಮಸೀದಿ ಅಧ್ಯಕ್ಷ ಹಾಜಿ ಕೆ. ಶೇಖಬ್ಬ, ಆಲಡ್ಕ ಎಂಜೆಎಂ ಅಧ್ಯಕ್ಷ ಬಿ. ಅಬೂಬಕರ್‌ತ್ರೀಮೆನ್ಸ್, ಕಾರ್ಯದರ್ಶಿ ಹಾಜಿ ಪಿ.ಎಂ. ಉಮ ರಬ್ಬ ಭಾಗವಹಿಸಿದ್ದರು. ಬಂಟ್ವಾಳ ಬ್ಯಾರಿ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎಂ. ಅಬ್ಬಾಸ್ ಅಲಿ, ಬಂಟ್ವಾಳ ಆರಾಧನಾ ಸಮಿತಿ ಸದಸ್ಯ ಯೂಸುಫ್ ಕರಂದಾಡಿ, ಇರಾ ಗ್ರಾಪಂ ಅಧ್ಯಕ್ಷ ಅಬ್ದುರ್ರಝಾಕ್ ಕುಕ್ಕಾಜೆ, ಬಂಟ್ವಾಳ ಪುರಸಭಾ ಸದಸ್ಯ ಅಬೂಬಕರ್ ಸಿದ್ದೀಕ್ ಗುಡ್ಡೆಅಂಗಡಿ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಸದಸ್ಯರಾದ ಹಮೀದ್ ಗೋಳ್ತಮಜಲು, ಝಕರಿಯಾ ಕಲ್ಲಡ್ಕ, ದಫ್ ಅಸೋಸಿಯೇಶನ್ ಸದಸ್ಯರಾದ ಕೆ.ಎಂ.ಎ. ಕೊಡುಂಗಾಯಿ, ಜಸೀಂ ಸಜಿಪ, ಆಶಿಕ್ ಕುಕ್ಕಾಜೆ, ನೌಫಲ್ ಕುಡ್ತಮುಗೇರು, ಪ್ರಮುಖರಾದ ಹಾರಿಸ್ ಕಲ್ಲಡ್ಕ, ಝುಬೈರ್ ತಲೆಮೊಗರು, ರಶೀದ್ ವಿಟ್ಲ ಉಪಸ್ಥಿತರಿದ್ದರು. ಎಸೋಸಿಯೇಶನ್‌ನ ಪ್ರಧಾನ ಕಾರ್ಯದರ್ಶಿ ಪಿ.ಎಂ. ಅಶ್ರಫ್ ಪಾಣೆಮಂಗಳೂರು ಸ್ವಾಗತಿಸಿದರು. ಯು. ಮುಸ್ತಫಾ ಆಲಡ್ಕ ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News