ಕ್ರಿಕೆಟ್ ಪಂದ್ಯ: ಮಝ್ದಿ ತಂಡ ಪ್ರಥಮ,
Update: 2016-02-04 23:43 IST
ಫರಂಗಿಪೇಟೆ, ಫೆ.4: ಯಂಗ್ ಫ್ರೆಂಡ್ಸ್ ಅಮೆಮಾರ್ ವತಿಯಿಂದ ಇತ್ತೀಚೆಗೆ ನಡೆದ ಕ್ರಿಕೆಟ್ ಪಂದ್ಯದಲ್ಲಿ ಮಝ್ದಿ ಕಣ್ಣೂರು ತಂಡ ಪ್ರಥಮ, ಫ್ರೆಂಡ್ಸ್ ಅಮೆಮಾರ್ ತಂಡ ದ್ವಿತೀಯ ಸ್ಥಾನ ಪಡೆದಿದೆ. ರಿಯಾಝ್ ಕಣ್ಣೂರು ಪಂದ್ಯ ಶ್ರೇಷ್ಠ, ರಫೀಕ್ ಕಣ್ಣೂರು ಉತ್ತಮ ಎಸೆತಗಾರ, ಅಝೀಝ್ ಅಮೆಮಾರ್ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆದರು. ಈ ಸಂದರ್ಭ ಯಂಗ್ ಫ್ರೆಂಡ್ಸ್ ವ್ಯವಸ್ಥಾಪಕ ಸುಲೈಮಾನ್ ಉಸ್ತಾದ್, ಬಶೀರ್ ತಾಂಡೇಲು, ಅಬ್ದುಲ್ ಖಾದರ್, ಸಿದ್ದೀಕ್ ಎಂ.ಎಸ್., ಅಮೀರ್ ತುಂಬೆ, ಶರೀಫ್ ಅಮೆಮಾರ್ ಮತ್ತಿತರರು ಉಪಸ್ಥಿತರಿದ್ದರು.