×
Ad

ಹಿರಿಯಡ್ಕ ವಿದ್ಯಾರ್ಥಿಗಳಿಂದ ಬೀಚ್ ವಾಕ್

Update: 2016-02-04 23:46 IST


 ಉಡುಪಿ, ಫೆ.4: ಹಿರಿಯಡ್ಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಅಡ್ವೆಂಚರ್ ಕ್ಲಬ್ ವತಿಯಿಂದ ‘ಬೀಚ್ ವಾಕ್’ ವಿನೂತನ ಕಾರ್ಯಕ್ರವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು. ಕಾಲೇಜಿನ ಅಡ್ವೆಂಚರ್ ಕ್ಲಬ್‌ನ 50ವಿದ್ಯಾರ್ಥಿ-ವಿದ್ಯಾರ್ಥಿನಿಯರು ಹಾಗೂ 6 ಜನ ಉಪನ್ಯಾಸಕರನ್ನು ಒಳಗೊಂಡ ತಂಡ ಮಲ್ಪೆ ಬೀಚ್‌ನಿಂದ ಬೀಚ್ ಬದಿಯ ಪ್ಲಾಸ್ಟಿಕ್ ನೀರಿನ ಬಾಟಲಿಗಳನ್ನು ಹೆಕ್ಕುತ್ತಾ ಸುಮಾರು 20 ಕಿ.ಮೀ. ದೂರವನ್ನು ಕಾಲ್ನಡಿಗೆಯಲ್ಲಿಯೇ ಕ್ರಮಿಸಿದರು. ಸಂಜೆ ಈ ತಂಡ ಕಾಪು ದೀಪಸ್ತಂಭವನ್ನು ತಲುಪಿತು.ಕಾಲೇಜಿನ ಅಡ್ವೆಂಚರ್ ಕ್ಲಬ್‌ನ ಸಂಚಾಲಕ, ಭೌತಶಾಸ್ತ್ರ ಸಹಾಯಕ ಪ್ರಾಧ್ಯಾಪಕ ರಾಜೇಶ ಶೆಟ್ಟಿ ಜಿ., ವಿದ್ಯಾರ್ಥಿ ಸಂಚಾಲಕ ಮಂಜುನಾಥ್, ವಾಣಿಜ್ಯಶಾಸ್ತ್ರ ಉಪನ್ಯಾಸಕ ಪುನೀತ್, ವಿಘ್ನೇಶ್, ಸೂರಜ್, ರಶ್ಮಿತಾ ಕುಮಾರಿ, ದಿವ್ಯಶ್ರೀ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News