ಅಮಾಯಕ ವಿದ್ಯಾರ್ಥಿಗೆ ಹಲ್ಲೆ: ಸಿಎಫ್‌ಐ ಖಂಡನೆ
Update: 2016-02-04 23:53 IST
ಮಂಗಳೂರು, ಫೆ. 4: ಸ್ಟಾರ್‌ಕಾಲೇಜಿನ ವಿದ್ಯಾರ್ಥಿ ನಿಸಾರ್‌ರಿಗೆ ಸಿಸಿಬಿ ಪೊಲೀಸರು ಹಲ್ಲೆ ನಡೆಸಿದ ಘಟನೆಯನ್ನು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ತೀವ್ರವಾಗಿ ಖಂಡಿಸಿದೆ.
ನಿಸಾರ್ ಅಮಾಯಕನಾಗಿದ್ದು, ಯಾವುದೇ ಪ್ರಕರಣದಲ್ಲಿ ಭಾಗಿಯಾಗಿಲ್ಲವೆಂದು ತಿಳಿದ ನಂತರವೂ ಹಲ್ಲೆ ನಡೆಸಿದ ಪೊಲೀಸರ ಕ್ರಮವನ್ನು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ದ.ಕ.ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸುತ್ತದೆ. ಅಲ್ಲದೆ ಹಲ್ಲೆ ನಡೆಸಿದ ಪೊಲೀಸರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕೆಂದು ಸರಕಾರವನ್ನು ಆಗ್ರಹಿಸಿದೆ.