ಟಿಟಿಎಸ್‌ಎಸ್‌ನಿಂದ ಇಂದು ಮಜ್ಲಿಸುನ್ನೂರ್ ಸಂಗಮ
Update: 2016-02-04 23:53 IST
ಮಂಗಳೂರು, ಫೆ. 4: ಅಡ್ಯಾರ್ ಕಣ್ಣೂರಿನ ದರ್ಸ್ ವಿದ್ಯಾರ್ಥಿಗಳ ಸಂಘಟನೆ ಟಿಟಿಎಸ್‌ಎಸ್ ಆಶ್ರಯದಲ್ಲಿ ಪ್ರತಿ ತಿಂಗಳು ನಡೆಯುವ ಮಜ್ಲಿಸುನ್ನೂರ್‌ನ 3ನೆ ವಾರ್ಷಿಕ ಸಮಾರಂಭವು ಅಡ್ಯಾರ್ ಕಣ್ಣೂರಿನ ಬದ್ರಿಯಾ ಜುಮಾ ಮಸೀದಿ ವಠಾರದಲ್ಲಿ ಫೆ.5ರಿಂದ ಆರಂಭಗೊಂಡಿದೆ.
ಫೆಬ್ರವರಿ 5ರಂದು ಮಗ್ರಿಬ್ ನಮಾಝ್‌ನ ಬಳಿಕ ನಡೆಯಲಿರುವ ಮಜ್ಲಿಸುನ್ನೂರ್ ಆತ್ಮೀಯ ಸಂಗಮದ ನೇತೃತ್ವವನ್ನು ಅಡ್ಯಾರ್ ಕಣ್ಣೂರಿನ ಸಯ್ಯದ್ ಝೈನುಲ್ ಆಬಿದೀನ್ ಜಿಫ್ರಿ ತಂಙಳ್ ವಹಿಸಲಿದ್ದಾರೆ. ಸಯ್ಯದ್ ಫಝಲ್ ಶಿಹಾಬ್ ತಂಙಳ್ ಮಲಪ್ಪುರಂ ದುಆ ನೆರವೇರಿಸಲಿದ್ದು, ಮುದರ್ರಿಸ್ ಸೈಯದ್ ತ್ವಾಹಾ ಜಿಫ್ರಿ ತಂಙಳ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ರಹ್ಮತುಲ್ಲಾ ಖಾಸಿಮಿ ಮುತ್ತೇಡಂ ಪ್ರಭಾಷಣ ಮಾಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.