ಫೆ.14: ದುಗ್ಗಲಡ್ಕದಲ್ಲಿ ತುಳು ಮಿನದನ
ಸುಳ್ಯ, ಫೆ.4: ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಸಹಯೋಗದೊಂದಿಗೆ ದುಗ್ಗಲಡ್ಕದ ಕುರಲ್ ತುಳುಕೂಟ ಹಾಗೂ ಕೊಯಿಕುಳಿ ಮಿತ್ರ ಯುವಕ ಮಂಡಲಗಳ ಆಶ್ರಯದಲ್ಲಿ ಸುಳ್ಯ ತುಳು ಮಿನದನ ಕಾರ್ಯಕ್ರಮ ಫೆ.14ರಂದು ದುಗ್ಗಲಡ್ಕದ ಸರಕಾರಿ ಪ್ರೌಢಶಾಲಾ ವಠಾರದಲ್ಲಿ ನಡೆಯಲಿದೆ ಎಂದು ಅಕಾಡಮಿಯ ಸದಸ್ಯ ಕೆ.ಟಿ.ವಿಶ್ವನಾಥ ತಿಳಿಸಿದರು.
ುಳುನಾಡಿನ ವಿವಿಧ ಜಾನಪದ ಕ್ರೀಡಾ ಸ್ಪರ್ಧೆಗಳು ನಡೆಯಲಿವೆ. ಅಲ್ಲದೆ, ಮದುವೆಗದ್ದೆ ಬೋಜಪ್ಪಗೌಡ ಅಧ್ಯಕ್ಷತೆಯಲ್ಲಿ ತುಳು ನಾಡ್ದ ಜಾನಪದ ಗೊಬ್ಬುಲು ಕುರಿತು ನಡೆಯಲಿರುವ ವಿಚಾರಗೋಷ್ಠಿಯಲ್ಲಿ ದೊಡ್ಡಣ್ಣ ಬರೆಮೇಲು, ನಂದರಾಜ ಸಂಕೇಶ ಹಾಗೂ ಚಂದ್ರಶೇಖರ ಪೇರಾಲು ವಿಷಯ ಮಂಡಿಸಲಿದ್ದಾರೆ. ಬಳಿಕ ಸಂಜೀವ ಕುದ್ಪಾಜೆಯ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಲಿದೆ. ಆರೂವರೆಯಿಂದ ಬಾಲನಟ ತುಷಾರ್ ಗೌಡರಿಂದ ಜಾನಪದ ನೃತ್ಯ ಮತ್ತು ಸುರೇಶ್ ಅತ್ತಾವರ ನಿರ್ದೇಶನದ ಚಕ್ರಪಾಣಿ ನೃತ್ಯಕಲಾ ಕೇಂದ್ರದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಸಮಾರೋ ಸಮಾರಂಭದಲ್ಲಿ ಒಡಿಯೂರಿನ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಶಾಸಕ ಎಸ್.ಅಂಗಾರ, ಅಕಾಡಮಿಯ ಅಧ್ಯಕ್ಷೆ ಜಾನಕಿ ಎಂ.ಬ್ರಹ್ಮಾವರ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಚಿತ್ರನಟಿ ಶೋಭಾ ರೈ ತಂಡದಿಂದ ‘ಬಲೆ ತೆಲಿಪಾಲೆ’ ಹಾಸ್ಯ ಕಾರ್ಯಕ್ರಮ, ಮಂಗಳೂರು ನೀನನಾಥ ನಿರ್ದೇಶನದ ‘ಮುದ್ದಣ್ಣಗ್ ಪ್ರಮೋಶನ್’ ಹಾಸ್ಯ ನಾಟಕ, ರಾತ್ರಿ 12ರಿಂದ ಬೆಳಗ್ಗೆಯವರೆಗೆ ಗೆಜ್ಜೆದ ಪೂಜೆ ಯಕ್ಷಗಾನ ನಡೆಯಲಿದೆ ಎಂದರು.