×
Ad

ಅಫಘಾತವಾಗಿ ಎರಡುವರ್ಷ ಕಳೆದರೂ ಮೈಕಲ್ ಶೂಮಾಕರ್ ಹುಷಾರಾಗುವ ಲಕ್ಷಣಗಳಿಲ್ಲ

Update: 2016-02-05 15:09 IST


ಸ್ವಿಟ್ಝರ್‌ಲೇಂಡ್: ಸ್ಕೀಯಿಂಗ್ ನಡೆಸುವಾಗ ಅಫಘಾತಕ್ಕೊಳಗಾಗಿ ಗಂಭೀರ ಗಾಯಗೊಂಡು ಕೋಮಾಕ್ಕೆ ಜಾರಿರುವ ಶೂಮಾಕರ್ ಹುಷಾರಾಗುವ ಲಕ್ಷಣಗಳು ಗೋಚರಿಸಿಲ್ಲ ಎಂದು ಫೆರಾರಿ ಮುಖ್ಯಸ್ಥ ಲುಕ್ ಡಿ. ಮೊಂಟಿಸೊಮೋಲೋ ಹೇಳಿದ್ದಾರೆ.


 ಅವರ ಪರಿಸ್ಥಿತಿ ದಿನಂದಿನಕ್ಕೆ ಗಂಭೀರವಾಗುತ್ತಾ ಹೋಗುತ್ತಿದೆ. ಹಾಗೂ ಅವರು ಪೂರ್ಣಗುಣಮುಖರಾಗುತ್ತಾರೆ ಎಂಬ ಭರಸೆಯನ್ನು ನಾವು ಕಳೆದುಕೊಳ್ಳುತ್ತಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. 2013 ಡಿಸೆಂಬರ್ನಲ್ಲಿ ಫ್ರಾನ್ಸ್‌ನಲ್ಲಾದ ಸ್ಕೀಯಿಂಗ್ ಅಫಘಾತದಲ್ಲಿ ತಲೆಗೆ ಗಂಭೀರ ಗಾಯಗೊಂಡು ಶೂಮಾಕರ್ ಕೋಮಾಕ್ಕೆ ಜಾರಿದ್ದರು. ಈನಡುವೆ ಶೂಮಾಕರ್ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಸುದ್ದಿಗಳು ಹರಿದಾಡಿದ್ದವು.


 ಸ್ವಿಟ್ಝರ್‌ಲೇಂಡ್‌ನ ಅವರ ಮನೆಯಲ್ಲಿ ಈಗ ಚಿಕಿತ್ಸೆ ನಡೆಯುತ್ತಿದೆ. ಆದರೆ ಶೂ ಮಾಕರ್ ಕುರಿತು ತನಗೆ ಆಶಾದಾಯಕ   ಸುದ್ದಿಗಳು ಸಿಗುತ್ತಿಲ್ಲ ಎಂದು ಮೊಂಟಿಸೊಮೋಲೋ ಹೇಳುತ್ತಾರೆ. ಆದರೆ ಅವರು ಶೂಮಾಕರ್ ಕುರಿತ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಿಲ್ಲ. ಆದರೆ ಶೂಮಾಕರ್ ಆರೋಗ್ಯದ ಸ್ಥಿತಿ ಗಂಭೀರವಾಗಿದೆ ಎಂದು ಮಾತ್ರ ಹೇಳಿದ್ದಾರೆ. ಪತ್ನಿ ಕೊರಿನಾ ಮಕ್ಕಳಾದ ಮೈಕ್, ಜೀನಾ ಮರಿಯಾ ಜೊತೆಗೆ ಶೂಮಾಕರ್ ರಜಾಕಾಲ ಅಸ್ವಾ ದಿಸಲು ಫ್ರಾನ್ಸ್‌ಗೆ ಹೋಗಿದ್ದಾಗ ಸ್ಕೇಯಿಂಗ್ ದುರಂತ ಸಂಭವಿಸಿತ್ತು. ಇಷ್ಟರಲ್ಲಿ ವೈದ್ಯರು ಹಲವಾರು ಶಸ್ತ್ರ ಚಿಕಿತ್ಸೆ ನಡೆಸಿದರೂ ಶೂಮಾಕರ್ ಸಾಮಾನ್ಯ ಜೀವನಕ್ಕೆ ಮರಳಿಲ್ಲ. 2014 ಸೆಪ್ಟಂಬರ್‌ನಲ್ಲಿ ಸ್ವಿಟ್ಝರ್‌ಲೇಂಡ್‌ನ ಅವರ ಜನೀವಾ ಬಂಗ್ಲೆಗೆ ಆಸ್ಪತ್ರೆಯಿಂದ ವರ್ಗಾಯಿಸಿ 15ಮಂದಿಯ ೈದರು ತಂಡ ಶೂಮಾಕರ್ ಶುಶುಷೆಯನ್ನು ಮಾಡುತ್ತಿದೆ. ಶೂಮಾಕರ್ ಚಿಕಿತ್ಸೆಗೆ ಈಗಾಗಲೇ ಭಾರೀ ವೆಚ್ಚ ತಗಲಿರುವುದರಿಂದಾಗಿ ಪತ್ನಿ ಕೊರಿನಾ ಶೂಮಾಕರ್‌ರ ಖಾಸಗಿ ವಿಮಾನ ಮತ್ತು ನೋರ್ವೆಯ ಬೃಹತ್ ವಸತಿಯನ್ನು ಇತ್ತೀಚೆಗೆ ಮಾರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News