ಕಿನ್ನಿಗೋಳಿ: ಪ್ರತಿಷ್ಠಾ ವರ್ಧಂತ್ಯುತ್ಸವ ವಾರ್ಷಿಕಾ ಜಾತ್ರಾಮಹೋತ್ಸವ ಕಾರ್ಯಕ್ರಮ
Update: 2016-02-05 16:49 IST
ಕಿನ್ನಿಗೋಳಿ; ಫೆ, 5: ಶ್ರೀ ಲಕ್ಷೀ ವೇಂಕಟರಮಣ ದೇವಸ್ಥಾನ ತಾಳಿಪಾಡಿ ಮಠ ಐಕಳ ಇಲ್ಲಿನ ೯ ನೇ ಪ್ರತಿಷ್ಠಾ ವರ್ಧಂತ್ಯುತ್ಸವ ವಾರ್ಷಿಕಾ ಜಾತ್ರಾಮಹೋತ್ಸವ ಕಾರ್ಯಕ್ರಮಗಳು ಪೆಬ್ರವರಿ ೧೩ ರಿಂದ ೨೦ರ ವರೆಗೆ ನಡೆಯಲಿದ್ದು ೧೩ ರಂದು ಸಂಜೆ ಭಜಾನಾ ಸಪ್ತಾಹ ಕಾರ್ಯಕ್ರಮ ದಿನಾಂಕ ೧೮ ರಂದು ಬೆಳಿಗ್ಗೆ ದೊಡ್ದ ರಂಗ ಪೂಜೆ,, ಮಹಾಗಣಪತಿ ಹೋಮ ೧೧.೧೫ ಕ್ಕೆ ದ್ವಜಾರೋಹಣ ಮತ್ತು ಸಂಜೆ ೪.೩೦ ಕ್ಕೆ ನಾಗಬನದಲ್ಲಿ ಸಾರ್ವಜನಿಕ ಅಶ್ಲೇಷಾ ಪೂಜೆ, ವರ್ತೆ ಪಂಜುರ್ಲಿ ಸನ್ನಿಧಿಯಲ್ಲಿ ಕಲಾಭಿವ್ರದ್ದಿ ಹೋಮ,ಉತ್ಸವ ಬಲಿ, ರಾತ್ರಿ ಶಯನ ಪೂಜೆ, ಕವಾಟ ಬಂಧನ, ದಿನಾಂಕ ೨೦ ರಂದುಕವಾಟೋದ್ಘಾಟನೆ, ೧೦ ಗಂಟೆಗೆ ಸಾರ್ವಜನಿಕ ಸತ್ಯಾನಾರಾಯಣ ಪೂಜೆ, ಮದ್ಯಾಹ್ನ ಮಹಾ ಪೂಜೆ ಅನ್ನ ಸಂತರ್ಪಣೆ, ರಾತ್ರಿ ೧೧ ಗಂಟೆಗೆ ಯಾತ್ರಾ ಬಲಿ, ಓಕುಳಿ ಜಲಕ, ಕಟ್ಟೆ ಪೂಜೆ, ಮದ್ಯಾಹ್ನ ೧.೦೦ ಕ್ಕೆ ದ್ವಜಾವರೋಹಣಗೊಳ್ಳಲಿದೆ ಈ ಎಲ್ಲಾ ಕಾರ್ಯಕ್ರಮಗಳಿಗೂ ಸರ್ವರು ಆಗಮಿಸಬೇಕಾಗಿ ತಾಳಿಪಾಡಿ ಮಠದ ಪ್ರಕಟನೆ ತಿಳಿಸಿದೆ.