×
Ad

ಮಂಗಳೂರು : ‘ಮೇಕ್ ಇನ್ ಇಂಡಿಯಾ’ ರಾಷ್ಟ್ರೀಯ ಕಾರ್ಯಗಾರ

Update: 2016-02-05 17:12 IST

ಮಂಗಳೂರು,ಫೆ.5:ನಗರದ ಬೋಂದೆಲ್‌ನಲ್ಲಿರುವ ಮಣೇಲ್ ಶ್ರೀನಿವಾಸ್ ನಾಯಕ್ ಮೆಮೋರಿಯಲ್ (ಎಂಎಸ್‌ಎನ್‌ಎಂ) ಬೆಸೆಂಟ್ ಇನ್ಸ್ಟಿಟ್ಯೂಟ್ ಆಫ್ ಪಿಜಿ ಸ್ಟಡೀಸ್‌ನ ಆಶ್ರಯದಲ್ಲಿ ಇಂದು ಎಕ್ಸ್‌ಪ್ಲೋರಿಂಗ್ ಇನ್ನೋವೇಟಿವ್ ಮ್ಯಾನೇಜ್‌ಮೆಂಟ್ ಪ್ರಾಕ್ಟಿಸಸ್ ಟು ಅಚಿವ್ ‘ಮೇಕ್ ಇನ್ ಇಂಡಿಯಾ’ ವಿಷಯದಲ್ಲಿ ರಾಷ್ಟ್ರೀಯ ಸಮ್ಮೇಳನವನ್ನು ಕಾಲೇಜಿನ ನೇತ್ರಾವತಿ ಸಭಾಂಗಣದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಕೇಂದ್ರಿಯ ಮಂಡಳಿ ನಿರ್ದೇಶಕ ದೀಪಕ್ ಈಶ್ವರ್‌ಬಾಯಿ ಅಮೀನ್ ಉದ್ಘಾಟಿಸಿದರು.

   ಈ ಸಂದರ್ಭದಲ್ಲಿ ಮಾತನಾಡಿದ ಅವರು ಉದ್ಯಮ ಸ್ಥಾಪನೆಯೊಂದಿಗೆ ಹೊಸ ಪದ್ದತಿಗಳನ್ನು ಅನ್ವೇಷಣೆ ಮಾಡುವುದು ಮುಖ್ಯವಲ್ಲ. ಉದ್ಯಮ ಸ್ಥಾಪನೆಯ ನಂತರ ಹೊಸ ಪದ್ದತಿಗಳನ್ನು ನಿರಂತರವಾಗಿ ಮಾಡುತ್ತಾ ಹೋದರೆ ಉದ್ಯಮದಲ್ಲಿ ಯಶಸ್ಸು ದೊರೆಯಲು ಸಾಧ್ಯ.ಈಗಾಲೆ ಉದ್ಯಮದಲ್ಲಿ ಯಶಸ್ಸನ್ನು ಗಳಿಸಿದ ಉದ್ಯಮಿಗಳು ಹೊಸ ಪದ್ದತಿಗಳ ಹಿಂದೆ ಹೋಗದೆ ಉದ್ಯಮ ಸ್ಥಾಪಿಸಿ ಯಶಸ್ಸು ಸಾಧಿಸಿದ್ದಾರೆ. ಬಂಡವಾಳದ ಹಿನ್ನೆಲೆಯೂ ಇಲ್ಲದೆ ಉದ್ಯಮಶೀಲತೆ ಮತ್ತು ಅವಕಾಶದಿಂದ ಅವರಿಗೆ ಯಶಸ್ಸು ಗಳಿಸಲು ಸಾಧ್ಯವಾಗಿದ್ದು ಇದನ್ನು ಪ್ರೇರಣೆಯಾಗಿ ತೆಗೆದುಕೊಂಡು ಮುಂದುವರಿಯಬೇಕು ಎಂದು ಹೇಳಿದರು.

   ಕಾರ್ಯಕ್ರಮದಲ್ಲಿ ವುಮೆನ್ಸ್ ನ್ಯಾಶನಲ್ ಎಜುಕೇಶನಲ್ ಸೊಸೈಟಿಯ ಅಧ್ಯಕ್ಷ ಕುಡ್ಪಿ ಜಗದೀಶ್ ಶೆಣೈ, ಉಪಾಧ್ಯಕ್ಷ ಮಣೇಲ್ ಅಣ್ಣಪ್ಪ ನಾಯಕ್ ಉಪಸ್ಥಿತರಿದ್ದರು.ಪ್ರೊ. ವಿನಾಯಕ್ ಪ್ರಸ್ತಾವನೆ ಗೈದರು.ಡಾ.ನಾರಾಯಣ ಕಾಯರ್‌ಕಟ್ಟೆ ಸ್ವಾಗತಿಸಿದರು, ರಶ್ಮಿಪ್ರಭು ಧನ್ಯವಾದಗೈದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News