ಮೂಡುಬಿದಿರೆ : ಪ್ರಕೃತಿದತ್ತ ಆಹಾರಗಳ ಸೇವನೆಯಿಂದ ಉತ್ತಮ ಆರೋಗ್ಯ : ಬಿ.ಎಮ್ ಹೆಗ್ಡೆ
ಮೂಡುಬಿದಿರೆ : ಕೃತಕ ಆಹಾರ ಪದಾರ್ಥಗಳು ನಮ್ಮ ಸಹಜ ದೇಹಶಕ್ತಿಯನ್ನು ಕುಗ್ಗಿಸುತ್ತವೆ. ಹಲವು ವಿಧದ ಪೌಷ್ಠಿಕಾಂಶಗಳನ್ನು ಒಳಗೊಂಡಿರುವ ಪ್ರಕೃತಿದತ್ತ ಆಹಾರಗಳನ್ನು ನಾವು ಸೇವಿಸುವುದರಿಂದ ಉತ್ತಮ ಆರೋಗ್ಯ ಲಭಿಸುತ್ತದೆ ಎಂದು ಮಣಿಪಾಲ ವಿವಿಯ ನಿವೃತ್ತ ಕುಲಪತಿ ಪ್ರೊ.ಬಿ.ಎಂ.ಹೆಗ್ಡೆ ಹೇಳಿದರು.
ಆಳ್ವಾಸ್ ಕಾಲೇಜಿನ ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಪೌಷ್ಟಿಕಾಂಶ ಮತ್ತು ಆಹಾರ ವಿಜ್ಞಾನ ವಿಭಾಗದ ಸಹಯೋಗದಲ್ಲಿ ನಡೆದ ಆಹಾರ ಸಂಸ್ಕರಣಾ ಪ್ರಕ್ರಿಯೆ- ಮೌಲ್ಯವರ್ಧನೆ ಮತ್ತು ಅವಕಾಶಗಳು ಎಂಬ ವಿಷಯದ ಕುರಿತು ಶುಕ್ರವಾರ ನಡೆದ ರಾಷ್ಟ್ರೀಯ ವಿಚಾರ ಸಂಕಿರ್ಣವನ್ನು ಉದ್ಘಾಟಿಸಿ ಮಾತಾನಾಡಿದರು.
ವಿಜ್ಞಾನವು ಪ್ರಯೋಗಿಕತ್ಮಕ ವಿಷಯಗಳಿಗೆ ಒತ್ತು ನೀಡುತ್ತದೆ. ನಾವು ವಿಜ್ಞಾನವನ್ನು ಅರ್ಥೈಸಿಕೊಳ್ಳಲು ಪ್ರಯತ್ನಿಸಬೇಕು. ಕೇವಲ ದುಡ್ಡು ಮಾಡಲು ಅಥವಾ ಉದ್ಯೋಗಕ್ಕಾಗಿ ಮಾತ್ರ ಶಿಕ್ಷಣವಲ್ಲ. ಬದಲಾಗಿ ನಾವು ಪಡೆಯುವ ಶಿಕ್ಷಣ ನಮ್ಮಲ್ಲಿ ಮಾನವೀಯತೆ ಮತ್ತು ಪ್ರೀತಿಯನ್ನು ಬೆಳೆಸುವಂತಿರಬೇಕು. ಈ ನಿಟ್ಟಿನಲ್ಲಿ ಸತ್ಯಾನ್ವೇಷಣೆಯೇ ವಿದ್ಯೆಯಾಗಬೇಕು ಎಂದು ಹೇಳಿದ ಅವರು ಹಳೆಯ ಸಂಶೋಧನೆಗಳನ್ನು ಪುನರಾವರ್ತಿಸುವುದು ಬೇಡ, ಹೊಸ ಸಂಶೋಧನೆಗಳನ್ನು ಆವಿಷ್ಕರಿಸುವ ಮೂಲಕ ಆಹಾರ ಸಂಸ್ಕರಣಾ ಪ್ರಕ್ರಿಯೆಯ ಬಗ್ಗೆ ಗಮನ ಹರಿಸಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಆಳ್ವಾಸ್ ಶಿಕ್ಷಣ ಪ್ರತಿಷ್ಟಾನದ ಟ್ರಸ್ಟಿ ವಿವೇಕ್ ಆಳ್ವ ಪ್ರಸ್ತಾವಿಕವಾಗಿ ಮಾತಾನಾಡಿದರು. ಈ ಕಾಯಕ್ರಮದಲ್ಲಿ ಆಳ್ವಾಸ್ ಕಾಲೇಜಿನ ಪ್ರಾಂಶುಪಾಲಾರಾದ ಡಾ.ಕುರಿಯಾನ್ ಹಾಗೂ ಪೌಷ್ಟಿಕಾಂಶ ಮತ್ತು ಆಹಾರ ವಿಜ್ಞಾನ ವಿಭಾಗದ ಮುಖ್ಯಸ್ಥೆ ಹಾಗೂ ಕಾರ್ಯಕ್ರಮದ ಸಂಯೋಜಕರು ಅರ್ಚನಾ ಪ್ರಭಾತ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಸಂಜನಾ ಕಾರ್ಯಕ್ರಮ ನಿರೂಪಿಸಿದರು. ಶಿಖಾ ವಂದಿಸಿದರು..
ಝೀಕಾ ಸಾಮಾನ್ಯ ವೈರಸ್ *
ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಭಯವನ್ನು ಹುಟ್ಟಿಸುತ್ತಿರುವ ಝೀಕಾ ಎನ್ನುವ ವೈರಸ್ ನೆಗಡಿ, ಜ್ವರದಷ್ಟೇ ಸಾಮಾನ್ಯವಾದುದು. ಆದರೆ ಇದರಿಂದ ತಲೆ ಸಣ್ಣದಾಗುತ್ತದೆ ಎಂಬ ವದಂತಿ ಇದೆ ಆದರೆ ತಲೆ ಸಣ್ಣದಾಗಿರುವುದು ಕೆಮಿಕಲ್ಸ್‌ನಿಂದಾಗಿ ಹೊರತು ವೈರಸ್‌ನಿಂದಲ್ಲ ಆದರೆ ವ್ಯಾಕ್ಸಿನ್ ವ್ಯಾಪಾರಸ್ಥರು ಈ ಸಾಮಾನ್ಯ ರೋಗವನ್ನು ಭಯಾನಕವಾದ ರೋಗವೆಂದು ಬಿಂಬಿಸುತ್ತಾರೆ ಆದ್ದರಿಂದ ಈ ಬಗ್ಗೆ ತಾವು ಸತ್ಯವನ್ನು ತಿಳಿದುಕೊಳ್ಳಬೇಕಾಗಿದೆ.
* ಕ್ರಿಮಿಗಳು ನಮ್ಮ ವೈರಿಗಳಲ್ಲ :
ನಾವೆಲ್ಲರೂ ಕ್ರಿಮಿಗಳಿಂದಾಗಿಯೇ ಹುಟ್ಟಿದ್ದೇವೆ. ನಮ್ಮ ದೇಹದಲ್ಲಿ 3000 ಮಿಲಿಯನ್ ಕ್ರಿಮಿಗಳಿವೆ ಆದರೆ ನಾವು ಕ್ರಿಮಿಗಳನ್ನು ಕೊಲ್ಲಲು ಆ್ಯಂಟಿ ಬಯೋಟಿಕನ್ನು ಬಳಸುವ ಮೂಲಕ ನಮ್ಮ ನಾಲಿಗೆಯ ರುಚಿಯನ್ನು ಕಳೆದುಕೊಳ್ಳುತ್ತಿದ್ದೇವೆ ಎಂದು ಬಿ.ಎಂ ಹೆಗ್ಡೆ ಕಳವಳ ವ್ಯಕ್ತಪಡಿಸಿದರು.