ಸುಳ್ಯ: ತಾಲೂಕು ಪಂಚಾಯತ್‌ಗೆ 10, ಜಿಲ್ಲಾ ಪಂಚಾಯತ್‌ಗೆ 3 ನಾಮಪತ್ರ ಸಲ್ಲಿಕೆ
ಸುಳ್ಯ: ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಚುನಾವಣೆಗೆ ನಾಮಪತ್ರ ಸಲ್ಲಿಕೆ ಚುರುಕುಗೊಂಡಿದ್ದು, ಶುಕ್ರವಾರ ಒಟ್ಟು 13 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಅರಂತೋಡು ಜಿಲ್ಲಾ ಪಂಚಾಯತ್ ಕ್ಷೇತ್ರಕ್ಕೆ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಗುತ್ತಿಗಾರು ಜಿಲ್ಲಾ ಪಂಚಾಯತ್ ಕ್ಷೇತ್ರಕ್ಕೆ ಬಿಜೆಪಿಯಿಂದ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ, ಜಾಲ್ಸೂರು ಜಿಲ್ಲಾ ಪಂಚಾಯತ್ ಕ್ಷೇತ್ರಕ್ಕೆ ಬಿಜೆಪಿಯಿಂದ ತಾಲೂಕು ಪಂಚಾಯತ್ ಸದಸ್ಯೆ ಪುಷ್ಪಾವತಿ ಬಾಳಿಲ ನಾಮಪತ್ರ ಸಲ್ಲಿಸಿದರು. ಜಾಲ್ಸೂರು ತಾಲೂಕು ಪಂಚಾಯತ್ ಕ್ಷೇತ್ರಕ್ಕೆ ಬಿಜೆಪಿಯಿಂದ ಗೋಪಿನಾಥ ಬೊಳುಬೈಲು, ಅಜ್ಜಾವರ ಕ್ಷೇತ್ರದಿಂದ ಚನಿಯ ಕಲ್ತಡ್ಕ, ಎಣ್ಮೂರಿನಿಂದ ಶುಭದಾ ರೈ, ಗುತ್ತಿಗಾರು ಕ್ಷೇತ್ರದಿಂದ ಯಶೋದಾ, ಸುಬ್ರಹ್ಮಣ್ಯ ದಿಂದ ರಮಾನಂದ ಎಣ್ಣೆಮಜಲು, ಮಡಪ್ಪಾಡಿ ಯಿಂದ ಉದಯ ಕೊಪ್ಪಡ್ಕ, ಐವರ್ನಾಡು ಕ್ಷೇತ್ರದಿಂದ ರಾಧಾಕೃಷ್ಣ ಬೊಳ್ಳೂರು, ಆಲೆಟ್ಟಿ ಕ್ಷೇತ್ರದಿಂದ ಪದ್ಮಾವತಿ ನಾಮಪತ್ರ ಸಲ್ಲಿಸಿದ್ದಾರೆ. ಶಾಸಕ ಎಸ್.ಅಂಗಾರ , ಬಿಜೆಪಿ ಪ್ರ.ಕಾರ್ಯದರ್ಶಿ ಮುಳಿಯ ಕೇಶವ ಭಟ್, ನಾಯಕರುಗಳಾದ ಎ.ವಿ.ತೀರ್ಥರಾಮ, ವೆಂಕಟ್ ದಂಬೆಕೋಡಿ, ಎಸ್.ಎನ್.ಮನ್ಮಥ, ಬಿ.ಕೆ.ಬೆಳ್ಯಪ್ಪ, ಪಿ.ಜಿ.ಎಸ್.ಎನ್.ಪ್ರಸಾದ್, ಶ್ರೀರಾಮ ಪಾಟಾಜೆ, ನವೀನ್ ರೈ ಮೇನಾಲ, ಗುಣವತಿ ಕೊಲ್ಲಂತಡ್ಕ ಮೊದಲಾದವರು ಉಪಸ್ಥಿತರಿದ್ದರು.