ಸುಳ್ಯ: ಬಿಜೆಪಿ ಸೇರಿದ ಕೈ ಮುಖಂಡ
ಸುಳ್ಯ: ಹಿರಿಯ ಕಾಂಗ್ರೆಸ್ ಮುಂದಾಳು, ಹರಿಹರಪಲ್ಲತ್ತಡ್ಕದ ಧುರೀಣ ದುರ್ಗಾದಾಸ ಮಲ್ಲಾರ ಬಿಜೆಪಿಗೆ ಸೇರಿದ್ದಾರೆ. ಶುಕ್ರವಾರ ಸುಳ್ಯದ ಬಿಜೆಪಿ ಕಛೇರಿಯಲ್ಲಿ ಶಾಸಕ ಎಸ್.ಅಂಗಾರ ಹಾಗೂ ಸುಳ್ಯ ಮಂಡಲ ಬಿಜೆಪಿ ಅಧ್ಯಕ್ಷ ಹರೀಶ್ ಕಂಜಿಪಿಲಿಯವರು ಪಕ್ಷದ ಧ್ವಜ ನೀಡಿ ದುರ್ಗಾದಾಸರನ್ನು ಪಕ್ಷಕ್ಕೆ ಸೇರಿಸಿಕೊಂಡರು. ಬಳಿಕ ಮಾತನಾಡಿದ ದುರ್ಗಾದಾಸರು, ಕಾಂಗ್ರೆಸ್ ಪಕ್ಷ ನನಗೆ ಸಾಕಷ್ಟು ಅವಕಾಶಗಳನ್ನು ನೀಡಿದೆ. ಆದರೂ ಇತ್ತೀಚೆಗೆ ನಾನೇ ಬೆಳೆಸಿದ ಕಾಂಗ್ರೆಸ್ಸಿಗರ ಕೆಲವು ವರ್ತನೆಯಿಂದ ಬೇಸತ್ತಿದ್ದೇನೆ. ಜೊತೆಗೆ ಬಿಜೆಪಿಯವರ ಸೇವಾ ಮನೋಭಾವವನ್ನು ಮೆಚ್ಚಿಕೊಂಡಿದ್ದೇನೆ. ಆದ್ದರಿಂದ ಚುನಾವಣೆ ಸಂದರ್ಭದಲ್ಲಿ ಬಿಜೆಪಿಗೆ ನೆರವಾಗಬೇಕೆಂಬ ದೃಷ್ಟಿಯಿಂದ ಕಾಂಗ್ರೆಸಿಗೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರಿದ್ದೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗುತ್ತಿಗಾರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ, ಬಿಜೆಪಿ ಪ್ರ.ಕಾರ್ಯದರ್ಶಿ ಮುಳಿಯ ಕೇಶವ ಭಟ್, ನಾಯಕರುಗಳಾದ ಎ.ವಿ.ತೀರ್ಥರಾಮ, ವೆಂಕಟ್ ದಂಬೆಕೋಡಿ, ಎಸ್.ಎನ್.ಮನ್ಮಥ, ಕರುಣಾಕರ ಬರೆಮೇಲು, ಬಿ.ಕೆ.ಬೆಳ್ಯಪ್ಪ, ಪಿ.ಜಿ.ಎಸ್.ಎನ್.ಪ್ರಸಾದ್, ಶ್ರೀರಾಮ ಪಾಟಾಜೆ, ನವೀನ್ ರೈ ಮೇನಾಲ, ಹಿಮ್ಮತ್ ಕೆ.ಸಿ., ರಾಧಾಕೃಷ್ಣ ಬೊಳ್ಳೂರು, ದಿವಾಕರ ಮುಂಡೋಡಿ ಮೊದಲಾದವರು ಉಪಸ್ಥಿತರಿದ್ದರು.