×
Ad

ಕೇರಳ ಸೌರಫಲಕ ಹಗರಣ : ಪ್ರಧಾನ ಆರೋಪಿಯಿಂದ ನ್ಯಾಯಾಂಗ ಆಯೋಗಕ್ಕೆ ಲೈಂಗಿಕ ದೌರ್ಜನ್ಯ ಸಾಕ್ಷ ಹಸ್ತಾಂತರ

Update: 2016-02-05 18:17 IST

ತಿರುವನಂಪುರ, ಫೆ.5: ಕೇರಳ ಸೌರಫಲಕ ಹಗರಣದ ಪ್ರಧಾನ ಆರೋಪಿ ತಾನು ಅನುಭವಿಸಿದ್ದ ಲೈಂಗಿಕ ದೌರ್ಜನ್ಯದ ಪುರಾವೆಯನ್ನು ನ್ಯಾಯಾಂಗ ಆಯೋಗಕ್ಕೆ ಹಸ್ತಾಂತರಿಸಿದ್ದಾರೆ.
ಸೌರಫಲಕ ಹಗರಣದ ತನಿಖೆಯ ಕಾಲದಲ್ಲಿ ತಾನು ಅಧಿಕಾರಿದಲ್ಲಿದ್ದವರಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದೆನೆಂದು ಆರೋಪಿ ಸರಿತಾ ನಾಯರ್ ಎಂಬಾಕೆ ಆರೋಪಿಸಿದ್ದಾಳೆ.
ಆಕೆ ಈ ಸಂಬಂಧ ಸಾಕ್ಷವನ್ನು ಮುಚ್ಚಿದ ಲಕೋಟೆಯಲ್ಲಿ ವಿಚಾರಣಾ ಆಯೋಗಕ್ಕೆ ಸಲ್ಲಿಸಿದ್ದಾರೆ.
ಇದೇವೇಳೆ, ಸೋಲಾರ್ ಹಗರಣದ ಬಗ್ಗೆ ಪ್ರತಿಭಟನೆಗಳು ಅವ್ಯಾಹತವಾಗಿ ನಡೆಯುತ್ತಿವೆ. ಎಡ ಪಕ್ಷಗಳ ಶಾಸಕರು ಶುಕ್ರವಾರ ಕೇರಳ ವಿಧಾನ ಸಭೆಯ ಹೊರಗೆ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಸರಕಾರದ ವಿರುದ್ಧ ಪ್ರದರ್ಶನ ನಡೆಸಿದ್ದಾರೆ.
ಈ ಮೊದಲು ವಿಪಕ್ಷ ನಾಯಕರು ಸದನದೊಳಗೆ ಘೋಷಣೆ ಹಾಗೂ ಫಲಕ ಪ್ರದರ್ಶನ ನಡೆಸಿ, ಬಳಿಕ ಸಭಾತ್ಯಾಗ ಮಾಡಿದ್ದರು.
ಸೌರ ವಿದ್ಯುತ್ ಯೋಜನೆಗೆ ಮಂಜುರಾತಿ ನೀಡಲು ಸರಿತಾ ನಾಯರ್‌ಳಿಂದ ರೂ.1.90 ಕೋಟಿ ಲಂಚ ಪಡೆದಿರುವ ಆರೋಪ ಬಂದ ಬಳಿಕ ಕೇರಳದ ಮುಖ್ಯಮಂತ್ರಿ ಉಮ್ಮನ್ ಚಾಂಡಿ ವ್ಯಾಪಕ ವಾಗ್ದಾಳಿಗೊಳಗಾಗಿದ್ದಾರೆ.
ಮುಖ್ಯಮಂತ್ರಿ ರಾಜೀನಾಮೆ ನೀಡಬೇಕೆಂದು ಸಿಪಿಎಂ ನಾಯಕ ಎಂ.ಎ.ಬೇಬಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News