×
Ad

ಆನ್ಲೈನ್ ಶಾಪಿಂಗ್ ಮೋಸ 85,000 ಕಳಕೊಂಡ ಅಮನ್ ದೀಪ್

Update: 2016-02-05 18:55 IST

ಆನ್‌ಲೈನ್ ಶಾಪಿಂಗ್ ಮಾಡುವವರೇ ಇಲ್ಲಿ ಗಮನಿಸಿ ಜಲಂಧರ್‌ನ ಸೆಂಟ್ರಲ್ ಟೌನ್‌ನ ಅಮನ್ ದೀಪ್ ಎಂಬವರು ಇತ್ತೀಚೆಗೆ ವೆಬ್‌ಸೈಟ್‌ನ ಆಲ್‌ಝೋನ್ ಲಾಜಸ್ಟಿಕ್ ನೆಟ್‌ವರ್ಕ್ ಮೂಲಕ ಶಾಪಿಂಗ್‌ನನು ಕುದುರಿಸಿಕೊಂಡಿದ್ದರು. ಅದಕ್ಕಾಗಿ 85,000 ರೂ.ವನ್ನು ಬ್ಯಾಂಕ್ ಮೂಲಕವೇ ಭರಿಸಿದ್ದರು. ಎಷ್ಟುಕಾದರೂ ಅಮನ್‌ದೀಪ್‌ರಿಗೆ ಅವರು ಶಾಪಿಂಗ್ ಮಾಡಿದ್ದ ವಸ್ತು ಬಂದಿರಲೇ ಇಲ್ಲ. 

   ಕಂಪೆನಿಯ ಅಮೆರಿಕದ ಕಚೇರಿಗೆ ಫೋನ್ ಮಾಡಿ ವಿಚಾರಿಸಿದಾಗಲೂ ವಸ್ತು ಬರಲಿಲ್ಲ. ಐಟಿಯವರಲ್ಲಿ ವಿಚಾರಿಸಿದಾಗಲೇ ಅವರಿಗೆ ತಾನುಮೋಸಹೋಗಿದ್ದೇನೆಂದು ಆನ್‌ಲೈನ್ ಫ್ರಾಡ್ ಆಗಿದ್ದೆನೆಂಬುದು ಅರಿವಾಗಿತ್ತು.

 ಈ ಕುರಿತು ಅಮನ್ ನಗರ ಪೊಲೀಸ್ ಕಮಿಶನರ್‌ರಿಗೆ ದೂರು ನೀಡಿದ್ದಾರೆ. ಐಟಿ ಸೆಕ್ಷನ್‌ಗೆ ಈ ಪ್ರಕರಣವನ್ನು ತನಿಖೆಗೆ ಒಪ್ಪಿಸಲಾಗಿದೆ. ಬ್ಯಾಂಕ್‌ನಮೂಲಕ ಅವರು ಹಣ ಕೊಟ್ಟ ವ್ಯಕ್ತಿ ಮತ್ತು ಖಾತೆ ಕೂಡ ನಕಲಿಯಾಗಿದೆ.

ಇಂತಹ ನಕಲಿ ಖಾತೆಗಳ ಕುರಿತು ತನಿಖೆ ನಡೆಸಬೇಕೆಂದೂ ಅಂತಹ ವ್ಯಕ್ತಿಗಳನ್ನು ಬಂಧಿಸಬೇಕೆಂದೂ ಈಗ ಅಮನ್ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News