×
Ad

ಮಂಗಳೂರಿನಲ್ಲಿ 64 ನೇ ರಾಷ್ಟ್ರೀಯ ದೇಹದಾರ್ಢ್ಯ ಸ್ಪರ್ಧೆ

Update: 2016-02-05 19:03 IST

ಮಂಗಳೂರು,ಫೆ.5: ಸೌತ್ ಕೆನರ ಅಮೆಚ್ಯೂರ್ ಬಾಡಿ ಬಿಲ್ಡರ್ ಅಸೋಸಿಯೇಶನ್ ನೇತೃತ್ವದಲ್ಲಿ ಮಂಗಳೂರಿನಲ್ಲಿ ಫೆ.12 ಮತ್ತು 13 ರಂದು ನಡೆಯಲಿರುವ 64ನೇ ರಾಷ್ಟ್ರೀಯ ದೇಹದಾರ್ಢ್ಯ ಸ್ಪರ್ಧೆಯನ್ನು ಫೆ.12 ರಂದು ಸಂಜೆ 6.30 ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿರುವರು ಎಂದು 64 ನೇ ರಾಷ್ಟ್ರೀಯ ಅಮೆಚ್ಯೂರ್ ಬಾಡಿಬಿಲ್ಡಿಂಗ್ ಮತ್ತು ಫಿಟ್‌ನೆಸ್ ಚಾಂಪಿಯನ್‌ಶಿಪ್ ಅಧ್ಯಕ್ಷ , ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದರು.

ನಗರದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಸ್ಪರ್ಧೆಯ ಆಹ್ವಾನ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಸಚಿವರಾದ ಬಿ.ರಮಾನಾಥ ರೈ, ಯು.ಟಿ.ಖಾದರ್, ವಿನಯ್ ಕುಮಾರ್ ಸೊರಕೆ, ಅಭಯಚಂದ್ರ ಜೈನ್, ರಾಜ್ಯ ಸಭಾಸದಸ್ಯ ಆಸ್ಕರ್ ಫೆರ್ನಾಂಡಿಸ್, ಸಂಸದ ನಳಿನ್ ಕುಮಾರ್ ಕಟೀಲ್, ಮನಪಾ ಮೇಯರ್ ಜೆಸಿಂತಾ ವಿಜಯ್ ಆಲ್ಪ್ರೆಡ್, ಜಿಲ್ಲೆಯ ಶಾಸಕರು, ವಿಧಾನಪರಿಷತ್ ಸದಸ್ಯರು ಪಾಲ್ಗೊಳ್ಳಲಿದ್ದಾರೆ . ಶಾಸಕ ಜೆ.ಆರ್ ಲೋಬೋ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು. ಸಮಾರೋಪ ಸಮಾರಂಭದಲ್ಲಿ ಗೃಹಸಚಿವ ಜಿ.ಪರಮೇಶ್ವರ್, ಸಚಿವ ದಿನೇಶ್ ಗುಂಡುರಾವ್, ಸಂಸದ ವೀರಪ್ಪ ಮೊಲಿ, ಮಾಜಿ ಕೇಂದ್ರ ಸಚಿವ ಬಿ.ಜನಾರ್ಧನ ಪೂಜಾರಿ, ಸಚಿವ ರಮಾನಾಥ ರೈ ಪಾಲ್ಗೊಳಲಿದ್ದಾರೆ ಎಂದು ಹೇಳಿದರು. ಫೆ.12ರಂದು ಭಾರತ್ ಉದಯ್ , ಭಾರತ್ ಕಿಶೋರ್, ಭಾರತ್ ಕೇಸರಿ ಸ್ಪರ್ಧೆ ನಡೆಯಲಿದ್ದು ಫೆ.13 ರಂದು ಭಾರತ್ ಕುಮಾರ್, ಭಾರತ್ ಶ್ರೀ ಸ್ಪರ್ಧೆಗಳು ನಡೆಯಲಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕ್ರೀಡಾ ಮತ್ತು ಯುವಜನ ಇಲಾಖೆ ಉಪನಿರ್ದೇಶಕ ಪಾಂಡುರಂಗ ಗೌಡ, 64 ನೇ ರಾಷ್ಟ್ರೀಯ ಬಾಡಿಬಿಲ್ಡಿಂಗ್ ಮತ್ತು ಫಿಟ್‌ನೆಸ್ ಚಾಂಪಿಯನ್‌ಶಿಪ್ ಕಾರ್ಯದರ್ಶಿ ರೇಮಂಡ್ ಡಿ’ಸೋಜ ಮೊದಲಾದವರು ಉಪಸ್ಥಿತರಿದ್ದರು.

20 ರಾಜ್ಯಗಳ ಸ್ಪರ್ಧಿಗಳು ಭಾಗಿ

 20 ರಾಜ್ಯಗಳಿಂದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಅರ್ಹತೆ ಗಳಿಸಿದ 220 ಮಂದಿ ಈಗಾಗಲೆ ಹೆಸರು ನೊಂದಾಯಿಸಿದ್ದು ಇಲ್ಲಿ ಆಯ್ಕೆಯಾಗುವ ಕ್ರೀಡಾಳುಗಳು ಅಂತರಾಷ್ಟ್ರೀಯ ಕ್ರೀಡಾಕೂಟಕ್ಕೆ ಅರ್ಹತೆ ಗಳಿಸಲಿದ್ದಾರೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News