ಚಿನ್ನದ ಗಣಿ ಕುಸಿತ: 42 ಮಂದಿ ನಾಪತ್ತೆ 80 ಕಾರ್ಮಿಕರ ರಕ್ಷಣೆ

Update: 2016-02-05 14:16 GMT

ಜೊಹಾನ್ಸ್‌ಬರ್ಗ್, ಫೆ. 5: ಈಶಾನ್ಯ ದಕ್ಷಿಣ ಆಫ್ರಿಕದಲ್ಲಿ ಶುಕ್ರವಾರ ಚಿನ್ನದ ಗಣಿಯೊಂದು ಕುಸಿದು ಸುಮಾರು 115 ಕಾರ್ಮಿಕರು ಸಿಕ್ಕಿಹಾಕಿಕೊಂಡರು. ಬಳಿಕ ಅವರ ಪೈಕಿ ಸುಮಾರು 80 ಮಂದಿಯನ್ನು ರಕ್ಷಿಸಿ ಮೇಲೆ ತರಲಾಗಿದೆ.

ಲಿಲಿ ಗಣಿಯಲ್ಲಿ ಆರಂಭದಲ್ಲಿ 115 ಕಾರ್ಮಿಕರು ಸಿಕ್ಕಿಹಾಕಿಕೊಂಡರು, ಬಳಿಕ ಅವರ ಪೈಕಿ ಹೆಚ್ಚಿನವರನ್ನು ರಕ್ಷಿಸಲಾಗಿದೆ ಹಾಗೂ ಉಳಿದವರನ್ನು ಶೀಘ್ರವೇ ರಕ್ಷಿಸಲಾಗುವುದು ಎಂದು ಚಿನ್ನ ಉತ್ಪಾದಕ ‘ವಾಂಟೇಜ್ ಗೋಲ್ಡ್‌ಫೀಲ್ಡ್ಸ್’ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೈಕ್ ಮೆಕ್‌ಚೆಸ್ನಿ ತಿಳಿಸಿದರು.

ಸಾವು-ನೋವಿನ ಬಗ್ಗೆ ಯಾವುದೇ ವರದಿ ಬಂದಿಲ್ಲ.

ಗಣಿಯ ಪ್ರಧಾನ ದ್ವಾರದಲ್ಲಿ ಕುಸಿತ ಸಂಭವಿಸಿದೆ ಎಂದು ಹೇಳಿಕೆಯೊಂದರಲ್ಲಿ ಕಂಪೆನಿ ತಿಳಿಸಿದೆ.

ಆಸ್ಟ್ರೇಲಿಯದ ವಾಂಟೇಜ್ ಗೋಲ್ಡ್‌ಫೀಲ್ಡ್ಸ್‌ಕಂಪೆನಿ ದಕ್ಷಿಣ ಆಫ್ರಿಕದ ಬಾರ್ಬರ್‌ಟನ್‌ನಲ್ಲಿ ಚಿನ್ನದ ಗಣಿಗಾರಿಕೆ ನಡೆಸುತ್ತಿದೆ.

ಸುಮಾರು 76 ಕಾರ್ಮಿಕರನ್ನು ರಕ್ಷಿಸಲಾಗಿದೆ ಹಾಗೂ 42 ಮಂದಿ ನಾಪತ್ತೆಯಾಗಿದ್ದಾರೆ ಎಂದು ಪೊಲೀಸ್ ವಕ್ತಾರರೊಬ್ಬರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News