ಮೈಕ್ರೋಸಾಫ್ಟ್ ನಲ್ಲಿ ಕೋಟಿ ಸಂಬಳದ ಉದ್ಯೋಗ ಗಿಟ್ಟಿಸಿದ ಬಿಹಾರದ ವೆಲ್ಡರ್ ನ ಪುತ್ರ !

Update: 2016-02-05 14:59 GMT

ಕೋಟ , ರಾಜಸ್ಥಾನ , ಫೆ. ೫ : ಇನ್ನು ಕೆಲವೇ ತಿಂಗಳಲ್ಲಿ ಖರಗ್ಪುರ ಐಐಟಿಯಿಂದ ಪದವೀಧರನಾಗಿ ಹೊರಬಂದ ಕೂಡಲೇ ೨೧ ರ ಹರೆಯದ ವಾತ್ಸಲ್ಯ ಸಿಂಗ್ ಚೌಹಾನ್ ಸಿಲಿಕಾನ್ ವ್ಯಾಲಿಯಲ್ಲಿ ಮೈಕ್ರೋಸಾಫ್ಟ್ ಉದ್ಯೋಗಿಯಾಗಲಿದ್ದಾರೆ. ಆಗ ಬಿಹಾರದ ಪುಟ್ಟ ಗ್ರಾಮದ ವೆಲ್ಡರ್ ಒಬ್ಬನ ಪುತ್ರ ವಾತ್ಸಲ್ಯ ಸಿಂಗ್ ಪಡೆಯುವ ಸಂಬಳ ವರ್ಷಕ್ಕೆ ಒಂದು ಕೋಟಿ ರೂಪಾಯಿ !

೨೦೦೯ ರಲ್ಲಿ ಐಐಟಿ ಪ್ರವೇಶ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದ ವಾತ್ಸಲ್ಯ ಬಳಿಕ ಐಐಟಿ ಪ್ರವೇಶ ಪರೀಕ್ಷೆಗೆ ತರಬೇತಿಗೆ ದೇಶದಲ್ಲೇ ಖ್ಯಾತಿ ಪಡೆದ ರಾಜಸ್ಥಾನದ ಕೋಟದಲ್ಲಿ ತರಬೇತಿಗೆ ಸೇರಿದರು. ಅಲ್ಲಿನ ಮೂವರು ಶಿಕ್ಷಕರು ಆತನ ಖರ್ಚು ವೆಚ್ಚವನ್ನು ಭರಿಸಿದರು. " ಆತನ ಪ್ರತಿಭೆ ನೋಡಿ ಅವರೇ ಆತನ ಎಲ್ಲ ಖರ್ಚು ಭರಿಸಿದರು . ನನಗೆ ಆತ ಊರಿಗೆ ಬರುವಾಗ ರೈಲು ಟಿಕೆಟ್ ಗೆ ಮಾತ್ರ ಹಣ ಕೊಡಬೇಕಾಗುತ್ತಿತ್ತು " ಎಂದು ವಾತ್ಸಲ್ಯನ ತಂದೆ ಚಂದ್ರ ಕಾಂತ್ ಸಿಂಗ್ ಹೇಳಿದ್ದಾರೆ. ಈಗ ಅವರ ಪುತ್ರಿ ಕೋಟದಲ್ಲೇ ವೈದ್ಯಕೀಯ ಪ್ರವೇಶ ಪರೀಕ್ಷೆಗೆ ತರಬೇತಿ ಪಡೆಯುತ್ತಿದ್ದಾಳೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News