×
Ad

ಮುಲ್ಕಿ : ಗಾಂಜಾ ಸೇವನೆ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿ, ಜಾಮೀನಿನ ಮೇಲೆ ಬಿಡುಗಡೆ ಮಾಡಿದ ಮುಲ್ಕಿ ಪೊಲೀಸರು

Update: 2016-02-05 21:07 IST

 ಮುಲ್ಕಿ, ಫೆ. 5:  ಗಾಂಜಾ ಸೇವನೆ ಮಾಡುತ್ತಿದ್ದ ಇಬ್ಬರನ್ನು ಮುಲ್ಕಿ ಪೊಲೀಸರು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆಗೊಳಿಸಿರುವ ಘಟನೆ ಶುಕ್ರವಾರ ಸಂಜೆ ನಡೆದಿದೆ.
      ಬಂದಿತರನ್ನು ಮುಲ್ಕಿ ಬಪ್ಪನಾಡು ಬಳಿಯ ಚರಂತಿ ಪೇಟೆ ನಿವಾಸಿ ತೀರ್ಥೇಶ್ ಮತ್ತು ಪಡುಬಿದ್ರೆ ನಿವಾಸಿ ಸುವಿನ್ ಎಂದು ತಿಳಿದು ಬಂದಿದೆ.
      ಘಟನೆಯ ವಿವರ: ಇಂದು ಸಂಜೆಯ ವೇಳೆ ಬಪ್ಪನಾಡು ದೇವಸ್ಥಾನದ ಬಳಿಯ ಶಾಂಭವಿ ನದಿ ತಟದಲ್ಲಿ ಬಳಿ ಗಾಂಜಾ ಸೇವಿಸುತ್ತಿದ್ದ ವೇಳೆ ಖಚಿತ ಮಾಹಿತಿಯ ಮೇಲೆಗೆ ದಾಳಿ ನಡೆಸಿ ಇಬ್ಬರನ್ನು ವಶಕ್ಕೆ ಪಡೆದು ಬಳಿಕ ಜಾಮೀನಿನ ಮೇರೆಗೆ ಬಿಡುಗಡೆ ಗೋಳಿಸಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News