×
Ad

ಬಂಟ್ವಾಳ: ಜಿ.ಪಂ. ಚುನಾವಣೆಗೆ ನಾಮಪತ್ರ ಸಲ್ಲಿಕೆ

Update: 2016-02-06 12:37 IST

ಬಂಟ್ವಾಳ: ಕುರ್ನಾಡು ಜಿಪಂ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಕೀಲ ಬಿ.ಸಿ.ರೋಡ್ ತಾಪಂ ಸಭಾಂಗಣದಲ್ಲಿ ಶನಿವಾರ  ಚುನಾವಣಾಧಿಕಾರಿ ಡಾ. ಅಶೋಕ್ ಅವರಿಗೆ ನಾಮಪತ್ರ ಸಲ್ಲಿಸಿದರು.

ಬಂಟ್ವಾಳ: ಕೊಳ್ನಾಡು ಜಿಪಂ ಕಾಂಗ್ರೆಸ್ ಭಂಡಾಯ ಅಭ್ಯರ್ಥಿ ಯಿಂದ ನಾಮಪತ್ರ ಸಲ್ಲಿಕೆ
 

ಬಂಟ್ವಾಳ: ಕೊಳ್ನಾಡು ಜಿಪಂ ಕ್ಷೇತ್ರದ ಕಾಂಗ್ರೆಸ್ ಭಂಡಾಯ ಅಭ್ಯರ್ಥಿ ವಾಲ್ತಾಜೆ ನಾರಾಯಣ ಪೂಜಾರಿ, ಬಿ.ಸಿ.ರೋಡ್ ತಾಪಂ ಸಭಾಂಗಣದಲ್ಲಿ ಶನಿವಾರ  ಚುನಾವಣಾಧಿಕಾರಿ ಡಾ. ಅಶೋಕ್ ಅವರಿಗೆ ನಾಮಪತ್ರ ಸಲ್ಲಿಸಿದರು.

ಬಂಟ್ವಾಳ: ಗೊಳ್ತಮಜಲು ಜಿಪಂ ಕಾಂಗ್ರೆಸ್ ಅಭ್ಯರ್ಥಿ ಯಿಂದ ನಾಮಪತ್ರ ಸಲ್ಲಿಕೆ
 

ಬಂಟ್ವಾಳ: ಗೊಳ್ತಮಜಲು ಜಿಪಂ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಭಾರತಿ ರಮಾನಂದ ಪೂಜಾರಿ, ಬಿ.ಸಿ.ರೋಡ್ ತಾಪಂ ಸಭಾಂಗಣದಲ್ಲಿ ಶನಿವಾರ  ಚುನಾವಣಾಧಿಕಾರಿ ಡಾ. ಅಶೋಕ್ ಅವರಿಗೆ ನಾಮಪತ್ರ ಸಲ್ಲಿಸಿದರು.

ಪುದು: ಕಾಂಗ್ರೆಸ್ ನಿಂದ ನಾಮಪತ್ರ ಸಲ್ಲಿಕೆ
ಬಂಟ್ವಾಳ: ಪುದು ಜಿಪಂ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಎಫ್ ಉಮರ್ ಫಾರೂಕ್ ಶನಿವಾರ ಬಿ.ಸಿ.ರೋಡ್ ತಾಪಂ ಸಭಾಭವನದಲ್ಲಿ ಚುನಾವಣಾಧಿಕಾರಿ ಡಾ. ಅಶೋಕ್ ಅವರಿಗೆ ನಾಮಪತ್ರ ಸಲ್ಲಿಸಿದರು.

ಈ ವೇಳೆ ಪುದು ಗ್ರಾಪಂ ಉಪಾಧ್ಯಕ್ಷ ಮುಹಮ್ಮದ್ ಹಾಶೀರ್ ಪೇರಿಮಾರ್, ಪ್ರಕಾಶ್ ತುಂಬೆ, ಅಖ್ತರ್ ಹುಸೈನ್ ಉಮೊದಲಾದರು ಉಪಸ್ಥಿತರಿದ್ದರು.

ಪುದು: ಬಿಜೆಪಿಯಿಂದ ನಾಮಪತ್ರ ಸಲ್ಲಿಕೆ
ಬಂಟ್ವಾಳ: ಪುದು ಜಿಪಂ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ರವೀಂದ್ರ ಕಂಬಳಿ ಶನಿವಾರ ಬಿ.ಸಿ.ರೋಡ್ ತಾಪಂ ಸಭಾಭವನದಲ್ಲಿ ಚುನಾವಣಾಧಿಕಾರಿ ಡಾ. ಅಶೋಕ್ ಅವರಿಗೆ ನಾಮಪತ್ರ ಸಲ್ಲಿಸಿದರು.

ಈ ವೇಳೆ ತುಂಬೆ ಗ್ರಾಪಂ ಉಪಾಧ್ಯಕ್ಷ ಪ್ರವೀಣ್ ತುಂಬೆ, ಮಾಜಿ ಅಧ್ಯಕ್ಷ ಮುಹಮ್ಮದ್ ವಳವೂರು ಮೊದಲಾದರು ಉಪಸ್ಥಿತರಿದ್ದರು.

ಸಜಿಪಮುನ್ನೂರು: ಕಾಂಗ್ರೆಸ್ ನಿಂದ ನಾಮಪತ್ರ ಸಲ್ಲಿಕೆ
  ಬಂಟ್ವಾಳ: ಸಜಿಪಮುನ್ನೂರು ಜಿಪಂ ಕ್ಷೇತ್ರದ ಕಾಂಗ್ರೆಸ್  ಅಭ್ಯರ್ಥಿಯಾಗಿ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಶನಿವಾರ ಬಿ.ಸಿ.ರೋಡ್ ತಾಪಂ ಸಭಾಭವನದಲ್ಲಿ ಚುನಾವಣಾಧಿಕಾರಿ ಡಾ. ಅಶೋಕ್ ಅವರಿಗೆ ನಾಮಪತ್ರ ಸಲ್ಲಿಸಿದರು.

ಈ ವೇಳೆ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ಬಾಸ್ ಅಲಿ, ಪ್ರಕಾಶ್ ಶೆಟ್ಟಿ ತುಂಬೆ ಮೊದಲಾದರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News