ವಿದ್ಯಾಗಿರಿ-ಮಾಸ್ತಿಕಟ್ಟೆ ನವೀಕೃತ ಕೂಡುರಸ್ತೆ ಉದ್ಘಾಟನೆ
ಮೂಡುಬಿದಿರೆ : ಡಾಮರೀಕರಣ ಕಿತ್ತು ಹೋಗಿ ಕಳೆದ ಕೆಲವು ವರ್ಷಗಳಿಂದ ವಾಹನ ಸಂಚಾರಕ್ಕೆ ತೊಂದರೆಂನ್ನು ಉಂಟು ಮಾಡುತ್ತಿದ್ದ ವಿದ್ಯಾಗಿರಿ-ಮಾಸ್ತಿಕಟ್ಟೆ ಕೂಡುರಸ್ತೆಯನ್ನು ಪುರಸಭೆಯ ವತಿಯಿಂದ 22 ಲಕ್ಷರೂ ವೆಚ್ಚದಲ್ಲಿ ನವೀಕೃತಗೊಳಿಸಲಾಗಿದ್ದು ಇದನ್ನು ಸಚಿವ ಕೆ. ಅಭಯಚಂದ್ರ ಜೈನ್ ಅವರು ಶನಿವಾರ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಸರಕಾರದ ಸಹಕಾರದೊಂದಿಗೆ ಪುರಸಭೆಯು ವಿದ್ಯಾಗಿರಿ-ಮಾಸ್ತಿಕಟ್ಟೆಯ ಕೂಡುರಸ್ತೆಗೆ ರೂ 22 ಲಕ್ಷ ವೆಚ್ಚದಲ್ಲಿ ಮರುಡಾಮರೀಕರಣವನ್ನು ಮಾಡಲಾಗಿದೆ. ಸುಂದರ ಮೂಡುಬಿದಿರೆಗೆ ಉತ್ತಮ ರಸ್ತೆಗಳನ್ನು ನೀಡುವ ನಿಟ್ಟಿನಲ್ಲಿ ಪುರಸಭೆಯ ವ್ಯಾಪ್ತಿಯಲ್ಲಿರುವ ಎಲ್ಲಾ ರಸ್ತೆಗಳಿಗೆ ಡಾಮರೀಕರಣ ಮತ್ತು ಪ್ಯಾಚ್‌ವರ್ಕ್‌ಗಳನ್ನು ಮಾಡುವ ಮೂಲಕ ರಸ್ತೆಗಳನ್ನು ಪರಿವರ್ತನೆ ಮಾಡಲಾಗುತ್ತಿದೆ ಎಂದು ಹೇಳಿದರು.
ಪುರಸಭಾಧ್ಯಕ್ಷೆ ರೂಪಾ ಸಂತೋಷ್ ಶೆಟ್ಟಿ ಮಾತನಾಡಿ ಸಾರ್ವಜನಿಕರ ಹಲವು ಸಮಯಗಳ ಬೇಡಿಕೆಯಾಗಿತ್ತು ಈ ರಸ್ತೆ. ಮೊದಲ ಆದ್ಯತೆಯೊಂದಿಗೆ ರಸ್ತೆಗೆ ಡಾಮರೀಕರಣ ಮಾಡಲಾಗಿದೆ ಎಂದು ತಿಳಿಸಿದರು. ಪುರಸಭಾ ಉಪಾಧ್ಯಕ್ಷೆ ಶಕುಂತಲಾ ದೇವಾಡಿಗ, ಸ್ಥಾಯಿ ಸಮಿತಿ ಅಧ್ಯಕ್ಷ ಕೊರಗಪ್ಪ, ಮೂಡಾ ಅಧ್ಯಕ್ಷ ಸುರೇಶ್ ಕೋಟ್ಯಾನ್, ಮೂಡಾ ಸದಸ್ಯ ಸುರೇಶ್ ಪ್ರಭು, ವಾರ್ಡ್ ಸದಸ್ಯ ನಾಗರಾಜ ಪೂಜಾರಿ, ಸದಸ್ಯರುಗಳಾದ ರತ್ನಾಕರ ದೇವಾಡಿಗ, ಸುಪ್ರಿಯಾ ಡಿ.ಶೆಟ್ಟಿ, ಪಿ.ಕೆ ತೋಮಸ್, ಬಾಹುಬಲಿ ಪ್ರಸಾದ್, ಲಕ್ಷ್ಮಣ್ ಪೂಜಾರಿ, ಪ್ರಸಾದ್, ವನಿತಾ, ಪುರಸಭಾ ಕಂದಾಯ ನಿರೀಕ್ಷಕ ಧನಂಜಯ, ಇಂಜಿನಿಯರ್ ದಿನೇಶ್ ಮತ್ತಿತರರು ಈ ಸಂದರ್ಭದಲ್ಲಿದ್ದರು.