ಕೊಣಾಜೆ : ಪಿ.ಎ.ಕಾಲೇಜಿನಲ್ಲಿ ಡಾ. ಎಸ್.ಎ. ಖಾನ್‌ರವರಿಂದ ಅತಿಥಿ ಉಪನ್ಯಾಸ
ಕೊಣಾಜೆ ಸಮೀಪದ ನಡುಪದವು ಪಿ.ಎ.ಕಾಲೇಜಿನಲ್ಲಿ ಡಾ. ಎಸ್.ಎ. ಖಾನ್‌ರವರಿಂದ ಅತಿಥಿ ಉಪನ್ಯಾಸ ಕಾರ್ಯಕ್ರಮವು ನಡೆಯಿತು. ಪಿ.ಎ.ಕಾಲೇಜಿನಲ್ಲಿ ಡಾ. ಎಸ್.ಎ. ಖಾನ್‌ರವರಿಂದ ಅತಿಥಿ ಉಪನ್ಯಾಸ
ಕೊಣಾಜೆ: ಕೊಣಾಜೆಯ ನಡುಪದವಿನಲ್ಲಿರುವ ಪಿ.ಎ.ಇಂಜಿನಿಯರಿಂಗ್ ಕಾಲೇಜಿನಲ್ಲಿ ಡಿಪೆನ್ಸ್ ಮತ್ತು ಸೌರ ಸಂಪನ್ಮೂಲಗಳಲ್ಲಿ ಇತ್ತೀಚಿನ ಬೆಳವಣಿಗೆ ಎಂಬ ವಿಚಾರದಲ್ಲಿ ಅತಿಥಿ ಉಪನ್ಯಾಸ
ಕಾರ್ಯಕ್ರಮವು ಗುರುವಾರ ನಡೆಯಿತು. ಮಲೇಷ್ಯಾದಕೌಲಾಲಾಂಪುರ ಅಂತರರಾಷ್ಟ್ರೀಯ ಇಸ್ಲಾಮಿಕ್ ವಿಶ್ವವಿದ್ಯಾನಿಲಯ
ದ ಪ್ರೊ. ಡಾ ಎಸ್.ಎ. ಖಾನ್ ರವರು ಪಿ.ಎ. ಇಂಜಿನಿಯರಿಂಗ್ ಕಾಲೇಜಿಗೆ ಭೇಟಿ ನೀಡಿ ನೀಡಿ ಉಪನ್ಯಾಸ ಕಾರ್ಯಕ್ರಮವನ್ನು ನೆರವೇರಿಸಿದರು. ಅವರು ಜೆಟ್ ಇಂಜಿನ್, ಜೆಟ್ ನೊಯಿಸ್, ಮಿಸೈಲ್ ತಂತ್ರಜ್ಞಾನ, ರಾಕೆಟ್‌ಗಳ ಬಗ್ಗೆ ತಮ್ಮ ವಿಚಾರಧಾರೆಯನ್ನು ಮಂಡಿಸಿದರು.
ಅಲ್ಲದೆ ಇಂದಿನ ಜಾಗತಿಕ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳಿಗೆ ತಂತ್ರಜ್ಞಾನ ಕ್ಷೇತ್ರದಲ್ಲಿ ವಿಪುಲ ಅವಕಾಶಗಳಿದ್ದು ಇವುಗಳನ್ನು ಬಳಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು. ಕಾಲೇಜಿನ ಪ್ರಾಂಶುಪಾಲರಾದಡಾ.ಅಬ್ದುಲ್ ಷರೀಫ್ ಸಾಂದರ್ಬಿಕವಾಗಿ ಮಾತನಾಡಿದರು.
ಶೈಕ್ಷಣಿಕ ನಿರ್ದೇಶಕ ಪ್ರೊ. ಸರ್ಫರಾಜ್ ಹಾಶಿಂ, ಸಂಶೋಧನಾ ವಿಭಾಗದ ಡೀನ್ ಡಾ.ಝಹೀದ್ ಅನ್ಸಾರಿ ಸಮಾರೋಪ ಭಾಷಣ ಮಾಡಿದರು. ಉಪಪ್ರಾಂಶುಪಾಲರಾದ ಡಾ.ರಮೀಜ್ ಎಂ.ಕೆ. ವಂದಿಸಿದರು.