ಎಲ್‌ಎನ್ ಮಿತ್ತಲ್‌ರ ಉಕ್ಕು ಕಂಪೆನಿ ಭಾರೀ ನಷ್ಟದಲ್ಲಿ
ಲಂಡನ್: ಜಗತ್ತಿನ ಬಹುದೊಡ್ಡ ಉಕ್ಕು ಕಂಪೆನಿ ಆರ್ಸಲರ್‌ಮಿತ್ತಲ್‌ಗೆ ಕಳೆದ ವರ್ಷ 2015ರಲ್ಲಿ ಸುಮಾರು 8 ಬಿಲಿಯನ್ ಡಾರ್(ಸುಮಾರು 54,000 ಕೋಟಿರೂ. ) ನಷ್ಟ ಸಂಭವಿಸಿದೆ. ಶುಕ್ರವಾರ ಈ ಬಗ್ಗೆ ವಿವರಿಸಿರುವ ಕಂಪೆನಿ ಕಮೋಡಿಟಿಯ ಮೌಲ್ಯ ಕುಸಿತ ಇದಕ್ಕೆ ಕಾರಣವೆಂದು ಸೂಚಿಸಿದೆ. ಆದುದದರಿಂದ ಖರ್ಚಿನ ಬಾಬ್ತಿನಲ್ಲಿ ನಿರಂತರ ಕಡಿತ ನಡೆಸುತ್ತಿದೆ. 2014ರಲ್ಲಿ ಕಂಪೆನಿ 1.86 ಬಿಲಿನ್ ಡಾಲರ್(ಸುಮಾರು12,564 ಕೋ.ರೂ.)ನಷ್ಟವಾಗಿದೆ. ಎನ್‌ಆರ್‌ಐ ಬಿಲಿಯನರ್ ಎಲ್‌ಎನ್ ಮಿತ್ತಲ್ ನೇತೃತ್ವದ ಕಂಪೆನಿಯ ನಿವ್ವಳ ನಷ್ಟ 6.69 ಶತಕೋಟಿಗೇರಿದೆ. 2015ರಲ್ಲಿ ಅವರ ಕಂಪೆನಿಯು ಬಹಳ ಕಷ್ಟ ಅನುಭವಿಸಿದೆ. ಈ ವರ್ಷದಲ್ಲಿ ಕಬ್ಬಿಣದ ಅದಿರು ಮತ್ತು ಉಕ್ಕಿನ ಬೆಲೆ ಕುಸಿತವಾಗಿತ್ತು.
ಒಂದು ವರ್ಷದ ಹಿಂದೆ ಇದೇ ತ್ರೈಮಾಸಿಕದಲ್ಲಿ 99.5 ಕೋಟಿ ಡಾಲರ್ (ಸುಮಾರು 6.45ಕೋಟಿ ರೂ.) ನಷ್ಟವಾಗಿತ್ತು. ಕಂಪೆನಿಯ ಆದಾಯದಲ್ಲಿ ಇದೇ ತ್ರೈಮಾಸಿಕದಲ್ಲಿ ಶೇ. 25ರಷ್ಟು ಕಡಿತ ಅಂದರೆ 13.98 ಬಿಲಿಯನ್ ಡಾಲರ್ (ಸುಮಾರು 94,434 ಕೋಟಿ ರೂ) ಕಡಿತವಾಗಿದೆ. ಈ ವರ್ಷಕ್ಕೆ ಮೊದಲು ಇದೇ ಅವಧಿಯಲ್ಲಿ 18.72 ಬಿಲಿಯ್ ಡಾಲರ್ (ಸುಮಾರು 1,26,453ಕೋಟಿ ರೂ.) ಆಗಿತ್ತು. 2015ರಲ್ಲಿ ಕಂಪೆನಿಯ ನಿವ್ವಳ ಲಾಭ 7.9 ಬಿಲಿಯನ್ ಡಾಲರ್(ಸುಮಾರು 53,364ಕೋ. ರೂ.)ಆಗಿತ್ತು. ಆದರೆ ಇದರಲ್ಲಿ 4.8 ಬಿಲಿಯನ್ ಡಾಲರ್ (ಸುಮಾರು 32,424 ಕೋ. ರೂ.) ನಷ್ಟ ಬೇರೆ ಬೇರೆ ವೆಚ್ಚಗಳಿಂದಾಗಿ ಸಂಭವಿಸಿದೆ.