×
Ad

ಸುಳ್ಯ: 22 ನಾಮಪತ್ರ ಸಲ್ಲಿಕೆ

Update: 2016-02-06 17:26 IST

ಸುಳ್ಯ: ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಚುನಾವಣೆಗೆ ನಾಮಪತ್ರ ಸಲ್ಲಿಕೆ ಚುರುಕುಗೊಂಡಿದ್ದು, ಶನಿವಾರ ಒಟ್ಟು 22 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ತಾಲೂಕು ಪಂಚಾಯತ್‌ನ ಎಣ್ಮೂರು ಕ್ಷೇತ್ರಕ್ಕೆ ಕಾಂಗ್ರೆಸ್‌ನಿಂದ ವನಿತಾಕುಮಾರಿ ಎಸ್., ಮಡಪ್ಪಾಡಿ ಕ್ಷೇತ್ರಕ್ಕೆ ಕಾಂಗ್ರೆಸ್‌ನಿಂದ ಪಿ.ಸಿ.ಜಯರಾಮ, ಬೆಳ್ಳಾರೆಗೆ ಕಾಂಗ್ರೆಸ್‌ನ ನಳಿನಾಕ್ಷಿ, ಪಕ್ಷೇತರರಾಗಿ ಲಲಿತಾ ಆನಂದ, ಬಾಳಿಲಕ್ಕೆ ಕಾಂಗ್ರೆಸ್‌ನ ಪ್ರವೀಣ ಪ್ರಶಾಂತ ರೈ, ಬಿಜೆಪಿಯ ಜಾಹ್ನವಿ, ನೆಲ್ಲೂರು ಕೆಮ್ರಾಜೆ ಕ್ಷೇತ್ರಕ್ಕೆ ಬಿಜೆಪಿಯ ವಿದ್ಯಾಲಕ್ಷ್ಮಿ, ಕಾಂಗ್ರೆಸ್‌ನ ಚಂದ್ರಕಲಾ, ಅರಂತೋಡು ಕ್ಷೇತ್ರಕ್ಕೆ ಬಿಜೆಪಿಯ ಪುಷ್ಪಾ ಮೇದಪ್ಪ, ಕಾಂಗ್ರೆಸ್‌ನ ಹೇಮಲತಾ ಸಿ.ಎಚ್., ಜಾಲ್ಸೂರು ಕ್ಷೇತ್ರಕ್ಕೆ ಕಾಂಗ್ರೆಸ್‌ನ ತೀರ್ಥರಾಮ ಜಾಲ್ಸೂರು, ಪಂಜಕ್ಕೆ ಕಾಂಗ್ರೆಸ್‌ನ ಅಬ್ದುಲ್ ಗಫೂರ್, ಬಿಜೆಪಿಯ ಲೋಕೇಶ್ ಬರೆಮೇಲು, ಗುತ್ತಿಗಾರು ಕ್ಷೇತ್ರಕ್ಕೆ ಕಾಂಗ್ರೆಸ್‌ನ ಶಶಿಕಲಾ ಅಡ್ಡನಪಾರೆ, ಅಜ್ಜಾವರ ಕ್ಷೇತ್ರಕ್ಕೆ ಕಾಂಗ್ರೆಸ್‌ನ ಬಿ.ರಾಮ ನಾಮಪತ್ರ ಸಲ್ಲಿಸಿದರು.

ಸುಳ್ಯ ತಾಲೂಕಿನ ಮೂರು ಜಿಲ್ಲಾ ಪಂಚಾಯತ್ ಕ್ಷೇತ್ರಗಳಿಗೆ 7 ಮಂದಿ ಅಭ್ಯರ್ಥಿಗಳು ಶನಿವಾರ ನಾಮಪತ್ರ ಸಲ್ಲಿಸಿದರು. ಜಿಲ್ಲಾ ಪಂಚಾಯತ್‌ನ ಗುತ್ತಿಗಾರು ಕ್ಷೇತ್ರಕ್ಕೆ ಕಾಂಗ್ರೆಸ್‌ನ ವಿಮಲಾ ರಂಗಯ್ಯ, ಬೆಳ್ಳಾರೆ ಕ್ಷೇತ್ರಕ್ಕೆ ಕಾಂಗ್ರೆಸ್‌ನ ರಾಜೀವಿ ರೈ, ಬಿಜೆಪಿಯ ಎಸ್.ಎನ್.ಮನ್ಮಥ ಮತ್ತು ಕರುಣಾಕರ ಬರೆಮೇಲು, ಜೆಡಿಎಸ್‌ನಿಂದ ದಯಾಕರ ಆಳ್ವ, ಜಾಲ್ಸೂರು ಕ್ಷೇತ್ರಕ್ಕೆ ಕಾಂಗ್ರೆಸ್‌ನ ಸರಸ್ವತಿ ಕಾಮತ್, ಅರಂತೋಡು ಕ್ಷೇತ್ರಕ್ಕೆ ಜೆಡಿಎಸ್‌ನಿಂದ ಎ.ಕೆ.ಹಸೈನಾರ್ ನಾಮಪತ್ರ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News