×
Ad

ಸುಳ್ಯ: ಪಕ್ಷಗಳ ಅಧಿಕೃತ ಪಟ್ಟಿಯಲ್ಲೂ ಬದಲಾವಣೆ !

Update: 2016-02-06 17:32 IST

ಸುಳ್ಯ: ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಗೆ ಕಾಂಗ್ರೆಸ್ ಹಾಗೂ ಬಿಜೆಪಿ ಅಧಿಕೃತ ಪಟ್ಟಿಯನ್ನು ಬಿಡುಗಡೆಗೊಳಿಸಿದರೂ ಬಂಡಾಯದ ಭೀತಿಯಲ್ಲಿ ಹಾಗೂ ಅಭ್ಯರ್ಥಿಗಳು ಒಪ್ಪದ ಕಾರಣ ಕೆಲವೆಡೆ ಹೆಸರುಗಳು ಬದಲಾದ ಘಟನೆಯೂ ನಡೆದಿದೆ. ನೆಲ್ಲೂರು ಕೆಮ್ರಾಜೆ ತಾಲೂಕು ಪಂಚಾಯತ್ ಕ್ಷೇತ್ರಕ್ಕೆ ಬಿಜೆಪಿ ಸ್ಮಿತಾ ಬೊಳ್ಳಾಜೆಯವರ ಹೆಸರನ್ನು ಘೋಷಿಸಿತ್ತು. ಆದರೆ ಅವರು ಸ್ಪರ್ಧೆಗೆ ಮನಸ್ಸು ಮಾಡದ ಹಿನ್ನೆಲೆಯಲ್ಲಿ ಅಲ್ಲಿ ವಿದ್ಯಾಲಕ್ಷ್ಮಿ ನಾಮಪತ್ರ ಸಲ್ಲಿಸಿದ್ದಾರೆ.

ಕಾಂಗ್ರೆಸ್ ಪಕ್ಷ ಇದುವರೆಗೆ ಜಿಲ್ಲಾ ಪಂಚಾಯತ್ ಅಭ್ಯರ್ಥಿಗಳ ಪಟ್ಟಿಯನ್ನು ಮಾತ್ರ ಬಿಡುಗಡೆಗೊಳಿಸಿದೆ. ಈ ಪೈಕಿ ಅರಂತೋಡಿನ ಅಭ್ಯರ್ಥಿ ಮಾಧವ ಗೌಡ ಕಾಮಧೇನು ಅವರು ಮಾತ್ರ ನಾಮಪತ್ರ ಇನ್ನಷ್ಟೇ ಸಲ್ಲಿಸಬೇಕಾಗಿದೆ. ಕಾಂಗ್ರೆಸ್ ತಾಲೂಕು ಪಂಚಾಯತ್ ಅಭ್ಯರ್ಥಿಗಳ ಅಧಿಕೃತ ಪಟ್ಟಿಯನ್ನು ನಾಮಪತ್ರ ಸಲ್ಲಿಕೆಯ ಅಂತಿಮ ದಿನವಾದ ಘೋಷಿಸುವುದಾಗಿ ಹೇಳಿದೆ. ಆದರೂ ಕಾಂಗ್ರೆಸ್ ಅಭ್ಯರ್ಥಿಗಳು ಬಿ ಫಾರ್ಮ್ ರಹಿತವಾಗಿ ನಾಮಪತ್ರ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News