ಸುಳ್ಯ: ಜೆಡಿಎಸ್ ನಾಯಕ ಸಂತೋಷ್ ಜಾಕೆ ಬಿಜೆಪಿಗೆ ಸೇರ್ಪಡೆ
Update: 2016-02-06 17:33 IST
ಸುಳ್ಯ: ಜೆಡಿಎಸ್ ನಾಯಕ, ಪಂಬೆತ್ತಾಡಿ ಸೊಸೈಟಿ ಉಪಾಧ್ಯಕ್ಷ ಸಂತೋಷ್ ಜಾಕೆ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಪುತ್ತೂರಿನಲ್ಲಿ ನಡೆದ ಬಿಜೆಪಿ ರೈತ ಜಾಗೃತಿ ಸಮಾವೇಶದಲ್ಲಿ ಅವರು ಬೆಂಬಲಿಗರೊಂದಿಗೆ ಬಿಜೆಪಿಗೆ ಸೇರ್ಪಡೆಗೊಂಡರು. ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಸಂತೋಷ್ ಜಾಕೆಯವರನ್ನು ಶಾಲು ಹಾಕಿ ಪಕ್ಷಕ್ಕೆ ಬರಮಾಡಿಕೊಂಡರು. ಸಂತೋಷ್ ಅವರೊಂದಿಗೆ ಯುವ ಜೆಡಿಎಸ್ ಕಾರ್ಯಕರ್ತರಾದ ಮಿಥುನ್ ಕೂಜುಗೋಡು, ಚನ್ನಕೇಶವ, ಕುಸುಮಾಧರ ಪುರಿಯ, ಯುವರಾಜ್ ಕೂಡಾ ಬಿಜೆಪಿಗೆ ಸೇರ್ಪಡೆಗೊಂಡರು.
ಫೆ.5 ರಂದು ಸುಳ್ಯದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ದುರ್ಗದಾಸ್ ಮಲ್ಲಾರವರನ್ನು ಕೂಡಾ ಈಶ್ವರಪ್ಪ ಶಾಲು ಹೊದಿಸಿ ಪಕ್ಷಕ್ಕೆ ಬರಮಾಡಿಕೊಂಡರು