×
Ad

ಕಾಸರಗೋಡು : ಅಕ್ರಮ ಮರಳುಗಾರಿಕೆ, ಹತ್ತು ದೋಣಿಗಳ ವಶ

Update: 2016-02-06 18:33 IST

ಕಾಸರಗೋಡು : ಅಕ್ರಮವಾಗಿ ಮರಳುಗಾರಿಕೆ  ಅಡ್ಡೆಗಳಿಗೆ ಕರಾವಳಿ  ಪೊಲೀಸರು ನಡೆಸಿದ  ದಾಳಿಯಿಂದ  ಹತ್ತು ದೋಣಿಗಳನ್ನೂ ವಶಪಡಿಸಿಕೊಂಡಿದ್ದಾರೆ.
ನೆಲ್ಲಿಕುಂಜೆ, ಪ ಳ್ಳ೦,  ತುರುತ್ತಿ,  ಬಾಂಗೋಡ್ ತೀರಗಳಿಗೆ  ಜಿಲ್ಲಾ ಪೊಲೀಸ್ ಮುಖ್ಯಸ್ಥ ಡಾ . ಎ . ಶ್ರೀನಿವಾಸ್ ರವರ ನಿರ್ದೇಶನದಂತೆ ದಾಳಿ ನಡೆಸಲಾಗಿದ್ದು 
ದಾಖಲೆಗಳಿಲ್ಲದೆ   ಮರಳುಗಾರಿಕೆ ನಡೆಸುತ್ತಿದ್ದ ಹತ್ತು ದೋಣಿ ಗಳನ್ನು  ವಶಪಡಿಸಿಕೊಳ್ಳಲಾಯಿತು.  ರಾತ್ರಿ ಭಾರೀ ಪ್ರಮಾಣದಲ್ಲಿ ಮರಳುಗಾರಿಕೆ ನಡೆಯುತ್ತಿತ್ತು . ಮರಳು ಗಾರಿಕೆ ಬಳಿಕ ದೋಣಿಗಳನ್ನು  ಕಾಂಡ್ಲಾ  ಪೊದೆ ಗಳಡಿಯಲ್ಲಿ  ಬಚ್ಚಿಡಲಾಗಿತ್ತು.
 ಅಕ್ರಮ ಮರಳು ಕೇಂದ್ರಗಳಿಗೆ  ಮುಂದಿನ ದಿನಗಳಲ್ಲೂ  ದಾಳಿ ನಡೆಸಲಾಗುವುದು ಎಂದು  ಪೊಲೀಸರು ತಿಳಿಸಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News