×
Ad

ಮೂಡುಬಿದಿರೆ: 245 ಮಂದಿಗೆ ಸಾಲ ಮನ್ನಾ ಆದೇಶ ಪತ್ರ ವಿತರಣೆ

Update: 2016-02-06 18:46 IST

ಮೂಡುಬಿದಿರೆ : ಪುರಸಭಾ ವ್ಯಾಪ್ತಿಯಲ್ಲಿ 24.10%, 7.25% ಹಾಗೂ 3%ರಡಿ ಕಛೇರಿ ಆದೇಶ ಮತ್ತು ಚೆಕ್ ವಿತರಣೆ, 245 ಮಂದಿಗೆ ಸಾಲಮನ್ನಾ ಆದೇಶಪತ್ರ ಮತ್ತು 71 ಮಂದಿಗೆ ಹಕ್ಕುಪತ್ರ ಸಹಿತ ಇತರ ಯೋಜನೆಗಳಡಿ ಆಯ್ಕೆಯಾದ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸುವ ಕಾರ್ಯಕ್ರಮವು ಸಮಾಜ ಮಂದಿರ ಸಭಾದಲ್ಲಿ ಶನಿವಾರ ನಡೆಯಿತು.  ಯುವಜನ ಸೇವೆ ಮತ್ತು ಮೀನುಗಾರಿಕಾ ಸಚಿವ ಕೆ. ಅಭಯಚಂದ್ರ ಜೈನ್ ಅವರು ಆದೇಶ ಪತ್ರ ಮತ್ತು ಹಕ್ಕುಪತ್ರವನ್ನು ವಿತರಿಸಿ ಮಾತನಾಡಿ ಹಣಕಾಸು ಸಂಕಷ್ಟದಿಂದ ಫಲಾನುಭವಿಗಳು ಆಶ್ರಯ ಮನೆಗಳನ್ನು ನಿರ್ಮಿಸಲು ವಿಫಲರಾಗುತ್ತಿದ್ದಾರೆ.

ಬಡವರ ಕಷ್ಟಗಳಿಗೆ ಸ್ಪಂಧಿಸಿದ ಸಿದ್ಧರಾಮಯ್ಯ ಸಾಲ ಮನ್ನಾ ಮಾಡುವ ಮೂಲಕ ಬಡವರನ್ನು ಮನೆ ಸಾಲದಿಂದ ಋಣಮುಕ್ತರಾಗಿಸಿದ್ದಾರೆ. ಅಲ್ಲದೆ ಪಕ್ಷ ಬೇದವಿಲ್ಲದೆ ಅರ್ಹ ಫಲಾನುಭವಿಗಳಿಗೆ ಸವಲತ್ತುಗಳನ್ನು ನೀಡಲಾಗುತ್ತಿದೆ ಎಂದು ಅವರು ಹೇಳಿದ ಅವರು ಮನೆ ಕಟ್ಟಬಹುದೆಂಬ ಆಸೆಯಿಂದ ಸರ್ಕಾರಿ ಸ್ಥಳದಲ್ಲಿ ಟೆಂಟ್ ಹಾಕಬೇಡಿ. ಟೆಂಟ್ ನಿಂದ ಗೌರವಯುತ ಬದುಕನ್ನು ಸಾಗಿಸಲು ಸಾಧ್ಯವಿಲ್ಲ. ಕಂದಾಯ ಅಧಿಕಾರಿಗಳು ಯಾವುದೇ ಕ್ಷಣದಲ್ಲಿ ತೆರವುಗೊಳಿಸಬಹುದು. ಯಾವುದೇ ರಾಜಕಾರಣಿಯ ಭರವಸೆಯ ಮಾತುಗಳಿಗೆ ಬಲಿಯಾಗಿ ಮೋಸ ಹೋಗಬೇಡಿ ಎಂದು ಕಿವಿ ಮಾತು ಹೇಳಿದರು. ಯುವಜನಸೇವೆ ಮತ್ತು ಹೇಳಿದರು.  ಪುರಸಭಾಧ್ಯಕ್ಷೆ ರೂಪಾ ಸಂತೋಷ್ ಶೆಟ್ಟಿ ಅಧ್ಯಕ್ಷತೆ ವಹಿಸಿದರು.

ಉಪಾಧ್ಯಕ್ಷೆ ಶಕುಂತಲಾ ದೇವಾಡಿಗ, ಮೂಡಾದ ಅಧ್ಯಕ್ಷ ಸುರೇಶ್ ಕೋಟ್ಯಾನ್, ಸ್ಥಾಯಿ ಸಮಿತಿ ಅಧ್ಯಕ್ಷ ಕೊರಗಪ್ಪ, ಮಾಜಿ ಅಧ್ಯಕ್ಷೆ ಸುಪ್ರಿಯಾ ಶೆಟ್ಟಿ, ಮೂಡಾದ ಮಾಜಿ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್, ಅಕ್ರಮ ಸಕ್ರಮ ಸಮಿತಿಯ ಅಧ್ಯಕ್ಷ ಪಿ. ಕೆ ಥೋಮಸ್, ಪುರಸಭೆಯ ಮಾಜಿ ಅಧ್ಯಕ್ಷ ರತ್ನಾಕರ ದೇವಾಡಿಗ, ಪುರಸಭಾ ಸದಸ್ಯರಾದ ಪ್ರೇಮಾ ಸಾಲ್ಯಾನ್, ದಿನೇಶ್ ಪೂಜಾರಿ, ಎಲಿಜಾ ಮಿನೇಜಸ್, ಲಕ್ಷ್ಮಣ ಪೂಜಾರಿ, ಅಬ್ದುಲ್ ಬಶೀರ್, ವನಿತಾ, ನಾಗರಾಜ ಪೂಜಾರಿ, ಪುರಸಭಾ ಮುಖ್ಯಾಧಿಕಾರಿ ಶೀನ ನಾಯ್ಕಾ, ವೇದಿಕೆಯಲ್ಲಿ ಉಪಸ್ಥಿತರಿದ್ದರು.  ಇದೇ ಸಂದರ್ಭದಲ್ಲಿ ಇಬ್ಬರು ವಿಕಲಚೇತನರಿಗೆ ಗಾಲಿ ಕುರ್ಚಿ ಹಾಗೂ ಇತರ ಸವಲತ್ತುಗಳನ್ನು ವಿತರಿಸಲಾಯಿತು.

ಪುರಸಭಾ ಕಂದಾಯ ಅಧಿಕಾರಿ ಧನಂಜಯ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News