×
Ad

ಮೂಡುಬಿದರೆ: ಶಿವಮೊಗ್ಗ ಮೂಲದ ವಿದ್ಯಾರ್ಥಿ ನಾಪತ್ತೆ

Update: 2016-02-06 18:48 IST

ಮೂಡುಬಿದರೆ: ವಿಧ್ಯಾರ್ಥಿಯೋರ್ವ ಹಾಸ್ಟೆಲ್‌ನಿಂದ ನಾಪತ್ತೆಯಾದ ಮೂಡುಬಿದರೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿವಮೊಗ್ಗ ಜಿಲ್ಲೆಯ ಶೇಖ್ ಯಾಸೀನ್(22) ನಾಪತ್ತೆಯಾದ ವಿದ್ಯಾರ್ಥಿ.

ಆಳ್ವಾಸ್ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಎಸ್ಸಿ ವಿದ್ಯಾರ್ಥಿ ಯಾಸೀನ್ ಮಾಸ್ತಿಕಟ್ಟೆ ಬಾಯ್ಸೆ ಹಾಸ್ಟೆಲ್‌ನಿಂದ ಕಳೆದ ಪೆ.1 ರಂದು ಬೆಳಿಗ್ಗೆ ಸುಮಾರು 8.45 ಗಂಟೆಗೆ ಕಾಲೇಜಿಗೆಂದು ಹೊರಟವನು ಅತ್ತ ಕಾಲೇಜಿಗೂ ಹೋಗದೆ, ಇತ್ತ ಹಾಸ್ಟೆಲ್‌ಗೂ ಮರಳದೆ ನಾಪತ್ತೆಯಾಗಿದ್ದಾನೆ. ಈತ ಮೂಲತಃ ಶಿವಮೊಗ್ಗದ ಎಡೆನಹಳ್ಳಿ ಸಾಗರದವನು ಎಂದು ತಿಳಿದು ಬಂದಿದೆ. ವಾರ್ಡನ್ ದಯಾನಂದ ರೈ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.

ಸಾದಾರಣ ಶರೀರವುಳ್ಳ ಈತ ಕನ್ನಡ, ಇಂಗ್ಲೀಷ್, ಉರ್ದು, ಹಿಂದಿ ಬಾಷೆ ಬಲ್ಲವನಾಗಿದ್ದಾನೆ. ಈತನ ಬಗ್ಗೆ ಮಾಹಿತಿ ಲಭ್ಯವಾದಲ್ಲಿ ಪೋಲಿಸ್ ಠಾಣೆಯನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News